ಕರ್ನಾಟಕ

karnataka

ETV Bharat / bharat

ಕಚ್ಚಾ ಬಾಂಬ್ ಸ್ಫೋಟ : ಓರ್ವ ವ್ಯಕ್ತಿ ಸಾವು - ಪುದುಚೆರಿಯಲ್ಲಿ ಕಚ್ಚಾ ಬಾಂಬ್ ಸ್ಫೋಟ

ಪುದುಚೇರಿಯಲ್ಲಿ ಕಚ್ಚಾ ಬಾಂಬ್ ಸ್ಫೋಟಗೊಂಡಿದ್ದುಲ್ಲಿ ದುರಂತದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಕಿರುಮಂಪಕ್ಕಂ ಗ್ರಾಮದಲ್ಲಿ ಘಟನೆ ನಡೆದಿದೆ. ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸಿ ತನಿಖೆ ಮಾಡುತ್ತಿದ್ದಾರೆ.

ಕಚ್ಚಾ ಬಾಂಬ್ ಸ್ಫೋಟ
One Dead In Crude Bomb Explosion

By

Published : Jan 31, 2020, 4:44 PM IST

ಪುದುಚೇರಿ(ಪಾಂಡಿಚೆರಿ):ಕಚ್ಚಾ ಬಾಂಬ್ ಸ್ಫೋಟಗೊಂಡು ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಪುದುಚೇರಿಯ ಕಿರುಮಂಪಕ್ಕಂ ಗ್ರಾಮದಲ್ಲಿ ನಡೆದಿದೆ.

ಸಾಂಬಾ ಶಿವಂ​ (35) ಮೃತ ವ್ಯಕ್ತಿ. ಇವರು ಮಾಜಿ ಕಾಂಗ್ರೆಸ್​ ಕೌನ್ಸಿಲರ್​ ಆಗಿದ್ದರು. ಇನ್ನು ಘಟನೆಯಲ್ಲಿ ಬೇರೆ ಯಾವುದೇ ವ್ಯಕ್ತಿ ಗಾಯಗೊಂಡಿಲ್ಲ ಎಂದು ತಿಳಿದು ಬಂದಿದೆ.

ಬಾಂಬ್​ ಎಸೆದ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಘಟನೆಯ ನಂತರ ಮೃತ ವ್ಯಕ್ತಿಯ ಸಂಬಂಧಿಕರು ಸ್ಥಳದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದು, ಈ ಕುರಿತಂತೆ ತನಿಖೆ ಮುಂದುವರೆದಿದೆ.

ABOUT THE AUTHOR

...view details