ಅನಂತಪುರ: ಪಬ್ಜಿ ನಿಷೇಧದಿಂದ ಬೇಸತ್ತ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ.
ಪಬ್ಜಿ ನಿಷೇಧದಿಂದ ಬೇಸರ... ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ - ಪಬ್ಗಿ ಗೀಳಿಗೆ ಯುವಕ ಬಳಿ
ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಯುವಕನೋರ್ವ ಪಬ್ಜಿ ಆನ್ಲೈನ್ ಗೇಮ್ ನಿಷೇಧದಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪಬ್ಜಿ ನಿಷೇಧದಿಂದ ಬೇಸತ್ತ ಯುವಕ ಆತ್ಮಹತ್ಯೆ
ಅನಂತಪುರ ಕಂದಾಯ ಕಾಲೋನಿ ನಿವಾಸಿ ಕಿರಣ್ಕುಮಾರ್ ಇದೇ ತಿಂಗಳ 5ರಿಂದ ನಾಪತ್ತೆಯಾಗಿದ್ದ. ಮಗ ಕಾಣೆಯಾಗಿದ್ದ ಬಗ್ಗೆ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕಳೆದ 7 ದಿನಗಳಿಂದ ಪೊಲೀಸರು ಯುವಕನಿಗಾಗಿ ಹುಡುಕಾಟ ನಡೆಸುತ್ತಿದ್ದರು.
ಆದರೆ ಇಂದು ಯುವಕನ ಪೋಷಕರು ಮನೆಯ ಸ್ಟೋರ್ ರೂಂ ಬಾಗಿಲು ತೆಗೆದು ನೊಡಿದಾಗ ಯುವಕ ನೇಣಿಗೆ ಶರಣಾಗಿರುವುದು ಕಂಡು ಬಂದಿದೆ. ಪಬ್ಜಿ ನಿಷೇಧದಿಂದ ಬೇಸಗೊಂಡಿದ್ದ ಎಂದು ತಿಳಿದು ಬಂದಿದೆ.