ಕರ್ನಾಟಕ

karnataka

ETV Bharat / bharat

ನಭಕ್ಕೆ ಜಿಗಿದ ಕಾರ್ಟೋಸ್ಯಾಟ್ 3... ಏನಿದರ ಮಹತ್ವ..? - ಕಾರ್ಟೋಸ್ಯಾಟ್ 3 ಮಾಹಿತಿ

ಭಾರತದ ಕಾರ್ಟೋಸ್ಯಾಟ್-3 ಸೇರಿದಂತೆ ಅಮೆರಿಕದ 13 ನ್ಯಾನೋ-ಸ್ಯಾಟಲೈಟ್​ಗಳನ್ನು ಪಿಎಸ್​ಎಲ್​ವಿ-ಸಿ47 ರಾಕೆಟ್​ ಹೊತ್ತು ಸಾಗಿದೆ. ಅಷ್ಟಕ್ಕೂ ಈ ಕಾರ್ಟೋಸ್ಯಾಟ್-3 ಉಪಗ್ರಹದ ಮಹತ್ವ ಏನು ಎನ್ನುವ ವಿವರ ಇಲ್ಲಿದೆ...

PSLV C-47 Launch
ಕಾರ್ಟೋಸ್ಯಾಟ್-3

By

Published : Nov 27, 2019, 2:36 PM IST

ಶ್ರೀಹರಿಕೋಟಾ(ಆಂಧ್ರಪ್ರದೇಶ):ಇಂದು ಬೆಳಗ್ಗೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ನಭಕ್ಕೆ ಜಿಗಿದ ಪಿಎಸ್​ಎಲ್​ವಿ-ಸಿ47 ರಾಕೆಟ್​, ಅತ್ಯಂತ ಪ್ರಮುಖ ಕಾರ್ಟೋಸ್ಯಾಟ್-3 ಉಪಗ್ರಹ ಹೊತ್ತು ಸಾಗಿದೆ.

ಭಾರತದ ಕಾರ್ಟೋಸ್ಯಾಟ್-3 ಸೇರಿದಂತೆ ಅಮೆರಿಕದ 13 ನ್ಯಾನೋ-ಸ್ಯಾಟಲೈಟ್​ಗಳನ್ನು ಪಿಎಸ್​ಎಲ್​ವಿ-ಸಿ47 ರಾಕೆಟ್​ ಹೊತ್ತು ಸಾಗಿದೆ. ಅಷ್ಟಕ್ಕೂ ಈ ಕಾರ್ಟೋಸ್ಯಾಟ್-3 ಉಪಗ್ರಹದ ಮಹತ್ವ ಏನು ಎನ್ನುವ ವಿವರ ಇಲ್ಲಿದೆ...

ಯಶಸ್ವಿಯಾಗಿ ನಭಕ್ಕೆ ಜಿಗಿದ ಪಿಎಸ್ಎಲ್​ವಿ - ​​​ಸಿ 47

ಸುಮಾರು 1,600 ಕೆಜಿ ತೂಕದ ಕಾರ್ಟೋಸ್ಯಾಟ್-3 ಉಪಗ್ರಹ ಹೆಚ್ಚುತ್ತಿರುವ ದೊಡ್ಡ ಪ್ರಮಾಣದ ನಗರ ಯೋಜನೆ, ಗ್ರಾಮೀಣ ಸಂಪನ್ಮೂಲ ಮತ್ತು ಮೂಲಸೌಕರ್ಯ ಅಭಿವೃದ್ಧಿ, ಕರಾವಳಿ ಭೂ ಬಳಕೆ ಮತ್ತು ಭೂ ವ್ಯಾಪ್ತಿಗೆ ಅಗತ್ಯವಿರುವ ಉತ್ತಮ ಗುಣಮಟ್ಟದ ಚಿತ್ರಗಳನ್ನು ಭೂಮಿಗೆ ರವಾನಿಸಲಿದೆ.

ಕಾರ್ಟೋಸ್ಯಾಟ್ 3 ಬಗ್ಗೆ ಮಾಹಿತಿ

ಐದು ವರ್ಷಗಳ ಜೀವಿತಾವಧಿ ಹೊಂದಿರುವ ಈ ಕಾರ್ಟೋಸ್ಯಾಟ್​-3 ಭವಿಷ್ಯದ ನಿಟ್ಟಿನಲ್ಲಿ ಮಹತ್ವದ ಯೋಜನೆ ಎಂದು ಇಸ್ರೋ ಹೇಳಿದೆ. ಪಿಎಸ್​ಎಲ್​ವಿ-ಸಿ47 ಇಸ್ರೋ ಈವರೆಗಿನ ಮಿಷನ್​ಗಳಲ್ಲೇ ಕ್ಲಿಷ್ಟಕರವಾಗಿತ್ತು ಎಂದು ಇಸ್ರೋ ಮುಖ್ಯಸ್ಥ ಕೆ.ಸಿವನ್ ತಿಳಿಸಿದ್ದಾರೆ.

ಇಸ್ರೋ ಮುಂದಿನ ಮಿಷನ್​ಗಳಾವವು..? ಸಿವನ್ ಹೇಳ್ತಾರೆ ಕೇಳಿ..!

ABOUT THE AUTHOR

...view details