ಕರ್ನಾಟಕ

karnataka

ETV Bharat / bharat

ಸಿಕ್ಕಿಂಗೆ ಪಿಎಸ್​ ಗೊಲೇ ಅಧಿಪತಿ: ಪ್ರಮಾಣ ಸ್ವೀಕಾರ - ಪ್ರಮಾಣ ಸ್ವೀಕಾರ

ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಅಧ್ಯಕ್ಷರೂ ಆಗಿರುವ ಪ್ರೇಮ್​ ಸಿಂಗ್​ ತಮಾಂಗ್​, ಪಿ.ಎಸ್​​. ಗೋಲೆ ಎಂದೇ ಪ್ರಸಿದ್ಧರು.

ಪಿಎಸ್​ ಗೊಲೇ ಅಧಿಪತಿ

By

Published : May 27, 2019, 2:20 PM IST

ಸಿಕ್ಕಿಂ: ನೂರಾರು ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಬೆಂಬಲಿಗರ ಸಮ್ಮುಖದಲ್ಲಿ 51 ವರ್ಷದ ಪಿ.ಎಸ್​. ಗೋಲೆ ಸಿಕ್ಕಿಂ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಅಧ್ಯಕ್ಷರೂ ಆಗಿರುವ ಪ್ರೇಮ್​ ಸಿಂಗ್​ ತಮಾಂಗ ಅವರು ಪಿ.ಎಸ್​​. ಗೋಲೆ ಎಂದೇ ಪ್ರಸಿದ್ಧರು.

ಇವರಿಗೆ ರಾಜ್ಯಪಾಲ ಗಂಗಾಪ್ರಸಾದ್​​ ಅವರು ಪಲಿಜಾರ್​ ಕ್ರೀಡಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರಮಾಣವಚನ ಬೋಧಿಸಿದರು.

ವಿಶೇಷ ಎಂದರೆ ಗೋಲೆ ಶಾಸನಸಭೆಯ ಸದಸ್ಯರಲ್ಲ. ಅವರು ಚುನಾವಣೆಗೂ ನಿಂತಿರಲಿಲ್ಲ. ಈ ನಡುವೆ ಈ ಪ್ರಮಾಣ ವಚನ ಸಮಾರಂಭಕ್ಕೆ ಮಾಜಿ ಸಿಎಂ ಪವನ್​ ಕುಮಾರ್​ ಚಾಮ್ಲಿಂಗ್​ ಹಾಗೂ ಸಿಕ್ಕಿಂ ಡೆಮಾಕ್ರಟಿಕ್​ ಫ್ರಂಟ್​ನ ಹಿರಿಯ ನಾಯಕರು ಗೈರು ಹಾಜರಾದರು.

ABOUT THE AUTHOR

...view details