ಕರ್ನಾಟಕ

karnataka

ETV Bharat / bharat

ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆ ದುರದೃಷ್ಟಕರ, ತೀವ್ರ ದುಃಖಕರ: ಮೋದಿ ಸರಣಿ ಟ್ವೀಟ್​​ - ತೀವ್ರ ದುಃಖಕರ ಮೋದಿ ಟ್ವೀಟ್​

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದು, ಇದೇ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ಸರಣಿ ಟ್ವೀಟ್​ ಮಾಡಿದ್ದಾರೆ.

Protests On Citizenship Amendment Act
ಪೌರತ್ವ ತಿದ್ದುಪಡಿ ಕಾಯ್ದೆ ಮೋದಿ

By

Published : Dec 16, 2019, 2:50 PM IST

ನವದೆಹಲಿ:ರಾಷ್ಟ್ರೀಯ ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಕೆಲವೊಂದು ರಾಜ್ಯಗಳಲ್ಲಿ ಹೊತ್ತಿಕೊಂಡಿರುವ ಕಿಚ್ಚು ಇಲ್ಲಿಯವರೆಗೂ ಆರಿಲ್ಲ. ಈ ಮಸೂದೆ ವಿರೋಧಿಸಿ ಪ್ರತಿದಿನ ಪ್ರತಿಭಟನೆ ನಡೆಯುತ್ತಿದ್ದು, ದಿನದಿಂದ ದಿನಕ್ಕೆ ಅದರ ತೀವ್ರತೆ ಜಾಸ್ತಿಯಾಗ್ತಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳು ದುರದೃಷ್ಟಕರ ಮತ್ತು ತೀವ್ರ ದುಃಖಕರ ಎಂದು ಪ್ರಧಾನಿ ಮೋದಿ ಸರಣಿ ಟ್ವೀಟ್​ ಮಾಡಿದ್ದಾರೆ.

ಮಸೂದೆ ಮೇಲೆ ಚರ್ಚೆ ಮತ್ತು ಭಿನ್ನಾಭಿಪ್ರಾಯ ನಡೆಸುವ ಅಗತ್ಯವಿದೆ. ಅದು ಪ್ರಜಾಪ್ರಭುತ್ವದ ಭಾಗಗಳಲ್ಲಿ ಒಂದು. ಅದನ್ನು ಬಿಟ್ಟು ಎಂದಿಗೂ ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವುದು ಮತ್ತು ಸಾಮಾನ್ಯರ ಜೀವನಕ್ಕೆ ತೊಂದರೆ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಅವರು ಟ್ವೀಟ್​ ಮಾಡಿದ್ದಾರೆ.

ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಪಶ್ಚಿಮ ಬಂಗಾಳ,ಅಸ್ಸೋಂ, ಹೈದರಾಬಾದ್​ ಹಾಗೂ ದೆಹಲಿಯಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ.

ABOUT THE AUTHOR

...view details