ನವದೆಹಲಿ:ಡಿಸೆಂಬರ್ 3ರೊಳಗೆಗೊತ್ತುಪಡಿಸಿದ ಸ್ಥಳಕ್ಕೆ ಪ್ರತಿಭಟನೆಯನ್ನು ಸ್ಥಳಾಂತರಿಸಿದರೆ, ಮರುದಿನವೇ ರೈತ ಸಂಘಟನೆಗಳ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮಾತುಕತೆ ನಡೆಸಲಿದೆ ಎಂದು ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ.
ನಿಗದಿ ಸ್ಥಳಕ್ಕೆ ಪ್ರತಿಭಟನೆ ಸ್ಥಳಾಂತರಿಸಿ, ಮಾತುಕತೆಗೆ ಬನ್ನಿ: ರೈತರಿಗೆ ಅಮಿತ್ ಶಾ ಮನವಿ
ಗೊತ್ತುಪಡಿಸಿದ ಸ್ಥಳಕ್ಕೆ ಪ್ರತಿಭಟನೆಯನ್ನು ಸ್ಥಳಾಂತರಿಸಿದರೆ, ಮರುದಿನವೇ ರೈತ ಸಂಘಟನೆಗಳ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮಾತುಕತೆ ನಡೆಸಲಿದೆ ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ.
ಕೃಷಿ ಕಾನೂನು ವಿರುದ್ಧ ರೈತರಿಂದ ಪ್ರತಿಭಟನೆ
ದೆಹಲಿ ಚಲೋ ಹಮ್ಮಿಕೊಂಡಿರುವ ರೈತರು, ರಾಜಧಾನಿಯ ಗಡಿಗಳಾದ ಸಿಂಗು ಮತ್ತು ಟಿಕ್ರಿಗಳಲ್ಲಿ ಉಳಿದುಕೊಂಡಿದ್ದಾರೆ. ರೈತರು ಬುರಾರಿಯ ನಿರಂಕರಿ ಸಮಗಂ ಮೈದಾನಕ್ಕೆ ಪ್ರತಿಭಟನೆ ಸ್ಥಳಾಂತರಿಸಿ, ಚರ್ಚೆಗೆ ಬರುವಂತೆ ಅಮಿತ್ ಶಾ ಮನವಿ ಮಾಡಿದ್ದಾರೆ.
ಗಾಜಿಯಾಬಾದ್-ದೆಹಲಿ ಗಡಿಯಲ್ಲಿ ಕೃಷಿ ತಿದ್ದುಪಡಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ. ಪ್ರತಿಭಟನೆಗಳು ರಾಮ್ ಲೀಲಾ ಮೈದಾನದಲ್ಲಿ ನಡೆಯುತ್ತವೆ, ನಾವೇಕೆ ನಿರಂಕರಿ ಮೈದಾನಕ್ಕೆ ತೆರಳಬೇಕು ಎಂದು ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕೈಟ್ ಪ್ರಶ್ನಿಸಿದ್ದಾರೆ.