ಚೆನ್ನೈ(ತಮಿಳುನಾಡು):ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ವಿರುದ್ಧ ಚೆನ್ನೈನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಕೊರೊನಾ ಭೀತಿ ಮಧ್ಯೆಯೇ ಸಿಎಎ-ಎನ್ಆರ್ಸಿ ವಿರುದ್ಧ ಚೆನ್ನೈನಲ್ಲಿ ಬೃಹತ್ ಪ್ರತಿಭಟನೆ - Massive protest in Chennai against CAA-NRC
ಕೊರೊನಾ ಹರಡುವಿಕೆ ಹಿನ್ನೆಲೆ ಹೆಚ್ಚು ಜನ ಒಂದು ಕಡೆ ಸೇರಬಾರದೆಂಬ ಸರ್ಕಾರದ ಆದೇಶದ ನಡುವೆಯೂ ಚೆನ್ನೈನಲ್ಲಿ ವಿವಾದಿತ ಸಿಎಎ, ಎನ್ಆರ್ಸಿ, ಎನ್ಪಿಆರ್ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಿತು.
ಸಿಎಎ-ಎನ್ಆರ್ಸಿ ವಿರುದ್ಧ ಚೆನ್ನೈನಲ್ಲಿ ಬೃಹತ್ ಪ್ರತಿಭಟನೆ
ನಗರದ ಮದ್ರಾಸ್ ಹೈಕೋರ್ಟ್ ಬಳಿ ತಮಿಳುನಾಡು ತೌಹೀದ್ ಜಮಾಅತ್ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಸಾವಿರಾರು ಜನರು ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.