ನವದೆಹಲಿ:ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು, ಪಕ್ಷದ ನಾಯಕ ಸತೀಶ್ ಉಪಾಧ್ಯಾಯ ನೇತೃತ್ವದಲ್ಲಿ "ದೆಹಲಿ ಜಲ ಮಂಡಳಿ ಅಧ್ಯಕ್ಷರನ್ನು ನೀವು ನೋಡಿದ್ದೀರಾ" ಎಂಬ ಪೋಸ್ಟರ್ಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
Missing! ಗಂಭೀರ್ ಬಳಿಕ ದೆಹಲಿಯಲ್ಲಿ ಇವರೂ ಕಾಣಿಸ್ತಿಲ್ವಂತೆ! - ಅರವಿಂದ್ ಕೇಜ್ರಿವಾಲ್ ಮಿಸ್ಸಿಂಗ್ ಪೋಸ್ಟರ್ ಹಿಡಿದು ಪ್ರತಿಭಟನೆ
ಕೆಲ ದಿನಗಳ ಹಿಂದಷ್ಟೇ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸಂಸದ ಗೌತಮ್ ಗಂಭೀರ್ ನಾಪತ್ತೆ ಪೋಸ್ಟರ್ಗಳು ಪತ್ತೆಯಾಗಿತ್ತು. ಈಗ ಮುಖ್ಯಮಂತ್ರಿ "ಅರವಿಂದ ಕೇಜ್ರಿವಾಲ್ ಅವರನ್ನು ನೀವು ನೋಡಿದ್ದೀರಾ" ಎಂಬ ಪೋಸ್ಟರ್ಗಳು ಸದ್ದು ಮಾಡ್ತಿವೆ. ಇದಕ್ಕೆ ಕಾರಣವೇನು ಅನ್ನೋದನ್ನು ನೀವೇ ನೋಡಿ.
![Missing! ಗಂಭೀರ್ ಬಳಿಕ ದೆಹಲಿಯಲ್ಲಿ ಇವರೂ ಕಾಣಿಸ್ತಿಲ್ವಂತೆ!](https://etvbharatimages.akamaized.net/etvbharat/prod-images/768-512-5109443-thumbnail-3x2-jay.jpg)
ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಕುಸಿಯುತ್ತಿರುವ ಪರಿಣಾಮ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಅದರ ನಡುವೆ ನಳ್ಳಿ ನೀರಿನ ಗುಣಮಟ್ಟ ಕುರಿತು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಬಿಡುಗಡೆ ಮಾಡಿದ ಶ್ರೇಯಾಂಕದಲ್ಲಿ ದೆಹಲಿ ಕೆಳ ಸ್ಥಾನದಲ್ಲಿದೆ. ಹೀಗಾಗಿ ನೀರಿನ ಗುಣಮಟ್ಟವನ್ನು ಪ್ರಶ್ನಿಸಿರುವ ಕಾರ್ಯಕರ್ತರು ಮುಖ್ಯಮಂತ್ರಿ ಹಾಗೂ ದೆಹಲಿ ಜಲ ಮಂಡಳಿಯ ಅಧ್ಯಕ್ಷರಾದ ಅರವಿಂದ ಕೇಜ್ರಿವಾಲ್ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. "ದೆಹಲಿ ಜಲ ಮಂಡಳಿ ಅಧ್ಯಕ್ಷರನ್ನು ನೀವು ನೋಡಿದ್ದೀರಾ" ಎಂದು ಪೋಸ್ಟರ್ಗಳಲ್ಲಿ ಬರೆದು ಅದನ್ನೇ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ದೆಹಲಿ ವಾಯುಮಾಲಿನ್ಯ ಕುರಿತಂತೆ ಕರೆಯಲಾಗಿದ್ದ ಸಭೆಗೆ ಗೈರು ಹಾಜರಾಗಿದ್ದಕ್ಕೆ, ಸಂಸದ ಗೌತಮ್ ಗಂಭೀರ್ ನಾಪತ್ತೆ ಪೋಸ್ಟರ್ಗಳನ್ನು ನಗರದ ಕೆಲ ಭಾಗಗಳಲ್ಲಿ ಹಾಕಲಾಗಿತ್ತು. ಈಗ ಸಿಎಂ ಕೇಜ್ರಿವಾಲ್ರನ್ನು ನೀವು ನೋಡಿದ್ದೀರಾ? ಎಂಬ ಪೋಸ್ಟರ್ಗಳ ಮೂಲಕ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸಿಎಂಗೆ ಬಿಸಿ ಮುಟ್ಟಿಸಿದ್ದಾರೆ.