ಐಜಾಲ್(ಮಿಜೋರಾಂ): ಮ್ಯಾನ್ಮಾರ್ನಲ್ಲಿ ಮಿಲಿಟರಿ ಸೇನಾ ದಂಗೆ ಕಾರಣದಿಂದ ಹದಗೆಟ್ಟಿದ್ದ ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸಬೇಕೆಂದು ಒತ್ತಾಯಿಸಿ ಮಿಜೋರಾಂನ ವಿದ್ಯಾರ್ಥಿ ಸಂಘ ಮಿಜೊ ಜಿರ್ಲೈ ಪಾವ್ಲ್(ಎಂಝಡ್ಪಿ) ಪ್ರತಿಭಟನೆ ನಡೆಸಿತು.
ಪ್ರತಿಭಟನೆಯಲ್ಲಿ ಮಿಜೋರಾಂನಲ್ಲಿರುವ ಅನೇಕ ಮಂದಿ ಮ್ಯಾನ್ಮಾರಿಗಳು ಮಿಲಿಟರಿ ದಂಗೆಗೆ ಕಾರಣರಾದ ಅಲ್ಲಿನ ಸೇನಾ ಮುಖ್ಯಸ್ಥ ಮಿನ್ ಆಂಗ್ ಹ್ಲೇಂಗ್ ಅವರ ನಡೆಯನ್ನು ವಿರೋಧಿಸಿ ಅನೇಕ ಫಲಕವನ್ನು ಹಿಡಿದು ಪ್ರತಿಭಟಿಸಿದರು.
ಪ್ರತಿಭಟನೆಯಲ್ಲಿ ಮಿಜೋರಾಂನ ವಿವಿಧ ಎನ್ಜಿಓಗಳು ಭಾಗವಹಿಸಿತ್ತು. ಮಿಜೋರಾಂ ಯಾವತ್ತಿಗೂ ಮ್ಯಾನ್ಮಾರ್ನ ನಮ್ಮ ಸಹೋದರರು ಮತ್ತು ಸಹೋದರಿಯರೊಂದಿಗೆ ನಿಲ್ಲುತ್ತದೆ ಎಂದು ಹೇಳಿದವು.
ಇದನ್ನೂ ನೋಡಿ:'ಮಯನ್ಮಾರ್ನಲ್ಲಿ ಭಾರತದ ರಾಯಭಾರಿ ಸುರಕ್ಷಿತ'
ಮ್ಯಾನ್ಮಾರ್ನ ಮಿಲಿಟರಿ ದಂಗೆಯ ವಿರುದ್ಧ ಮಿಜೋ ಪ್ರತಿಭಟನೆಗೆ ನಾರ್ತ್ ಈಸ್ಟ್ ಸ್ಟೂಡೆಂಟ್ಸ್ ಆರ್ಗನೈಸೇಶನ್ (ನೆಸೊ) ಸಹಾ ಸಾಥ್ ನೀಡಿದೆ. ಎಂಝಡ್ಪಿ ಮತ್ತು ಮಿಜೋ ಜನರು ಮಯನ್ಮಾರ್ ಜನರೊಂದಿಗೆ ಬಲವಾಗಿ ನಿಂತಿದ್ದಾರೆ. ಅನೇಕ ಮಿಜೋ ವಂಶಸ್ಥರು ಚಿನ್ ಮತ್ತು ಮ್ಯಾನ್ಮಾರ್ನ ಇತರ ರಾಜ್ಯಗಳಲ್ಲಿ ವಾಸಿಸುತ್ತಿದ್ದಾರೆ. ಈ ವಿಚಾರವಾಗಿ ಭಾರತ ಸರ್ಕಾರ ಮಧ್ಯಪ್ರವೇಶಿಸಬೇಕು, ಹಾಗೂ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಸಾಧ್ಯವಾದಷ್ಟು ಬೇಗ ಪುನಃಸ್ಥಾಪಿಸಲು ಸಹಾಯ ಮಾಡಬೇಕೆಂದು ನಾವು ಒತ್ತಾಯಿಸಿದ್ದೇವೆ ಎಂದು ನೆಸೊ ಸದಸ್ಯ ರಿಕಿ ಕೋಲ್ನಿ ಹೇಳಿದ್ದಾರೆ.