ಕರ್ನಾಟಕ

karnataka

ಅಲ್ಪಸಂಖ್ಯಾತರ ರಕ್ಷಣೆ ಜಾಗತಿಕ ಸಮಸ್ಯೆ: ಯುಎಸ್​​ ಮಾಜಿ ವಿದೇಶಾಂಗ ಕಾರ್ಯದರ್ಶಿ ರೈಸ್​ ಕಳವಳ

By

Published : Oct 23, 2019, 8:16 PM IST

ಧಾರ್ಮಿಕ ಅಲ್ಪಸಂಖ್ಯಾತರ ಸಮಸ್ಯೆ ಬಗ್ಗೆ ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಕಾಂಡೋಲೀಸಾ ರೈಸ್​ ಕಳವಳ ವ್ಯಕ್ತಪಡಿಸಿದ್ದಾರೆ.

ಕಾಂಡೋಲೀಜಾ ರೈಸ್

ನವದೆಹಲಿ:ಪ್ರಪಂಚದಾದ್ಯಂತ ಧಾರ್ಮಿಕ ಅಲ್ಪಸಂಖ್ಯಾತರ ದುಃಸ್ಥಿತಿಯ ಬಗ್ಗೆ ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಕಾಂಡೋಲೀಸಾ ರೈಸ್​ ಕಳವಳ ವ್ಯಕ್ತಪಡಿಸಿದ್ದು, ನವದೆಹಲಿಯಲ್ಲಿ ನಡೆದ ಎರಡನೇ ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್‌ನರ್‌ಶಿಪ್ ಫೋರಂ ಶೃಂಗಸಭೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದ್ದರು.

ವಿಶ್ವದಾದ್ಯಂತ ಧಾರ್ಮಿಕ ಅಲ್ಪಸಂಖ್ಯಾತರ ಸಮಸ್ಯೆ ಹೊಗಲಾಡಿಸಲು ಸಾಧ್ಯವಾಗದಂತಹ ಗಂಭೀರ ಸಮಸ್ಯೆಯಾಗಿದ್ದು, ಇವರ ರಕ್ಷಣೆಗೆ ನಾವು ಮುಂದಾಗಬೇಕಿದೆ ಎಂದರು. ಪ್ರಂಪಚದಲ್ಲಿ ಜನರು ಧಾರ್ಮಿಕ ವಿಷಯಗಳಿಗಾಗಿ ಹೊಡೆದಾಡಿಕೊಳ್ಳುತ್ತಿದ್ದು, ಇದು ನಾವೆಲ್ಲರೂ ಕೆಟ್ಟದಾಗಿ ಬಳಲುವಂತೆ ಮಾಡಿದೆ.

ಧಾರ್ಮಿಕ ಅಲ್ಪಸಂಖ್ಯಾತರ ಸಮಸ್ಯೆಗಳನ್ನಿಟ್ಟುಕೊಂಡು ನಿತ್ಯ ಸಮಸ್ಯೆ ಉದ್ಭವವಾಗುತ್ತಿದ್ದು, ಧರ್ಮಕ್ಕಾಗಿ ಜನರು ಒಬ್ಬರನ್ನೊಬ್ಬರು ಭಾವನಾತ್ಮಕವಾಗಿ ಹಿಂಬಾಲಿಸುತ್ತಿದ್ದಾರೆ. ಸಂಪ್ರದಾಯವಾದಿ ರಾಷ್ಟ್ರೀಯತೆ ಮೇಲೆ ತಮ್ಮ ರಾಜಕೀಯ ಸ್ಥಾಪಿಸುವ ಉದ್ದೇಶದಿಂದ ಸರ್ವಾಧಿಕಾರಿ ಧೋರಣೆ ಅನುಸರಣೆ ಮಾಡುತ್ತಿದ್ದು, ಈ ರೀತಿಯ ಕೆಲಸ ದೇಶದಲ್ಲಿ ನಡೆಯುತ್ತಿವೆ. ಇಂದಿನ ದಿನಗಳಲ್ಲಿ ಮುಕ್ತ ಪ್ರಜಾಪ್ರಭುತ್ವಕ್ಕಾಗಿ ಕೆಲಸ ಮಾಡಬೇಕಾಗಿದೆ. ಅಡಳಿತ ಮತ್ತು ಪ್ರತಿ ಪಕ್ಷ ಧಾರ್ಮಿಕ ಅಲ್ಪಸಂಖ್ಯಾತರ ಸಮಸ್ಯೆ ಹೊಗಲಾಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ ಎಂದರು.

ಪ್ರಜಾಪ್ರಭುತ್ವದ ಒಂದು ದೊಡ್ಡ ಅನುಕೂಲ ಎಂದರೆ ಆಡಳಿತ ನೀತಿಯಲ್ಲಿನ ಬದಲಾವಣೆ ಜನರ ಧ್ವನಿಯ ಮೂಲಕ ತರಬಹುದು. ಸರ್ವಾಧಿಕಾರಿ ಆಡಳಿತ ಹೊಗಲಾಡಿಸುವಲ್ಲಿ ಚೀನಾ, ರಷ್ಯಾ ದೇಶದ ವಿಷಯ ಪ್ರಸ್ತಾಪಿಸಿದ ರೈಸ್​, 2005-2009ರ ಅವಧಿಯಲ್ಲಿ ಇದೇ ರೀತಿಯಾಗಿ ನಡೆದಿದೆ ಎಂದು ತಿಳಿಸಿದರು.

ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್​ ಬುಷ್​ ಆಡಳಿತದಲ್ಲಿ ರಾಜ್ಯ ಕಾರ್ಯದರ್ಶಿಯಾಗಿದ್ದ ರೈಸ್​, ಐತಿಹಾಸಿಕ ಇಂಡೋ-ಯುಎಸ್ ಪರಮಾಣು ಒಪ್ಪಂದದ ಬಗ್ಗೆ ಮಾತನಾಡಿದ್ರು. ನಮ್ಮ ಆರ್ಥಿಕತೆಗಳಿಗಾಗಿ ನಾವು ಹೆಚ್ಚಿನ ಒಪ್ಪಂದ ಮಾಡಿಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಹೂಸ್ಟನ್​ ಕಾರ್ಯಕ್ರಮದಲ್ಲೂ ಇಂಡೋ - ಯುಎಸ್​ ಸೀಮಿತ ವ್ಯಾಪಾರ ಒಪ್ಪಂದದ ಬಗ್ಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂದರು.

ಟ್ರಂಪ್​ ಸರ್ಕಾರ ಭಾರತಕ್ಕೆ ಆದ್ಯತೆಯ ವ್ಯಾಪಾರ ಸವಲತ್ತು ಅಥವಾ ಸಾಮಾನ್ಯೀಕೃತ ವ್ಯವಸ್ಥೆ (ಜಿಎಸ್​ಟಿ) ಸೇರಿ ಪ್ರಮುಖ 28 ಉತ್ಪನ್ನಗಳ ಮೇಲೆ ಸುಂಕ ವಿಧಿಸಿತು. ಭೌಗೋಳಿಕ ರಾಜಕೀಯ ದೃಷ್ಟಿಕೋನ ಮತ್ತು ಜಾಗತಿಕ ಕ್ರಮವನ್ನು ಬದಲಾಯಿಸುವುದು ತಂತ್ರಜ್ಞಾನ, ತೈಲ ಮತ್ತು ಉದಯೋನ್ಮುಖ ಮಾರುಕಟ್ಟೆಗಳಿಂದ ನಡೆಸಲ್ಪಡುತ್ತದೆ ಎಂದು ತಿಳಿಸಿರುವ ಅವರು, ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್‌ನರ್‌ಶಿಪ್ ಫೋರಂ (ಯುಎಸ್‌ಐಎಸ್‌ಪಿಎಫ್), ಅಧ್ಯಕ್ಷ ಮತ್ತು ಸಿಇಒ ಡಾ. ಮುಖೇಶ್ ಅಘಿ ನೇತೃತ್ವದಲ್ಲಿ, ಈ ವರ್ಷ 300 ಕ್ಕೂ ಹೆಚ್ಚು ಖಾಸಗಿ ಸಂಸ್ಥೆಗಳು ಸಭೆ ನಡೆಸಲಿವೆ. ಜಾಗತಿಕ ಸಿಇಒಗಳು ಮತ್ತು ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್, ಪೆಟ್ರೋಲಿಯಂ ಮತ್ತು ನೈಸರ್ಗಿಕ ಸಚಿವ ಧರ್ಮೇಂದ್ರ ಪ್ರಧಾನ್, ಕೈಗಾರಿಕೆ ಮತ್ತು ರೈಲ್ವೆ ಸಚಿವ ಪಿಯೂಷ್ ಗೋಯಲ್, ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಡಾ. ಹೆನ್ರಿ ಕಿಸ್ಸಿಂಜರ್, ಮಾಜಿ ಯುಎಸ್ ರಾಯಭಾರಿ ತಿಮೋತಿ ರೋಮರ್ ಸೇರಿದಂತೆ ಯುಎಸ್ ಸಹ ಈ ಸಭೆಯಲ್ಲಿ ಭಾಗಿಯಾಗಲಿದೆ

ABOUT THE AUTHOR

...view details