ಕರ್ನಾಟಕ

karnataka

ETV Bharat / bharat

ಲಖನೌ : ಗುಂಡು ಹಾರಿಸಿ ಪ್ರಾಪರ್ಟಿ ಡೀಲರ್​ ಹತ್ಯೆ - ಉತ್ತರ ಪ್ರದೇಶದಲ್ಲಿ ಗುಂಡು ಹಾರಿಸಿ ಪ್ರಾಪರ್ಟಿ ಡೀಲರ್​ ಹತ್ಯೆ

ಲಖನೌದ ಮೋಹನ್‌ಲಾಲ್‌ಗಂಜ್‌ನ ಪುರನ್‌ಪುರ ಗ್ರಾಮದ ಬಳಿ ಪ್ರಾಪರ್ಟಿ ಡೀಲರ್ ಹತ್ಯೆ ಮಾಡಲಾಗಿದೆ.. ​

Property dealer shot dead in Lucknow
ಲಖನೌದಲ್ಲಿ ಪ್ರಾಪರ್ಟಿ ಡೀಲರ್​ ಹತ್ಯೆ

By

Published : Nov 3, 2020, 12:15 PM IST

Updated : Nov 3, 2020, 12:22 PM IST

ಲಖನೌ : ಉತ್ತರ ಪ್ರದೇಶದ ರಾಜಧಾನಿ ಲಖನೌನಲ್ಲಿ ಬೆಳ್ಳಬೆಳ್ಳಂಗೆ ಗುಂಡಿನ ಮೊರೆತ ಕೇಳಿ ಬಂದಿದ್ದು, ಬಿಡಿಸಿ ಸದಸ್ಯ ಮತ್ತು ಪ್ರಾಪರ್ಟಿ ಡೀಲರ್​​ನ್ನು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.

ನಗರದ ಹೊರವಲಯದ ಮೋಹನ್‌ಲಾಲ್‌ಗಂಜ್‌ನ ಪುರನ್‌ಪುರ ಗ್ರಾಮದ ಮನೋಜ್ ಯಾದವ್ ಕೊಲೆಯಾದ ವ್ಯಕ್ತಿ. ಮನೋಜ್ ಯಾದವ್ ಬೆಳಗ್ಗೆ ವಾಕಿಂಗ್ ಹೊರಟ ಸಮಯ ಸ್ಕಾರ್ಫಿಯೋ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಗುಂಡು ಹಾರಿಸಿ ಹತ್ಯೆ ಮಾಡಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಘಟನೆ ನಡೆದ ಬಳಿಕ ಕುಟುಂಬಸ್ಥರು ಮೃತದೇಹವನ್ನು ರಸ್ತೆ ಮಧ್ಯೆ ಇಟ್ಟು ಪ್ರತಿಭಟಿಸಿದರು. ಸ್ಥಳದಲ್ಲಿ ಹೆಚ್ಚಿನ ಜನ ಜಮಾವಣೆಗೊಂಡಿದ್ದರಿಂದ, ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಆಸ್ತಿ ವಿವಾದಕ್ಕೆ ಸಂಬಂಧಪಟ್ಟಂತೆ ಹತ್ಯೆ ನಡೆದಿದೆ ಎಂದು ಹೇಳಲಾಗ್ತಿದೆ. ಸ್ಥಳಕ್ಕೆ ಹಿರಿಯ ಪೊಲೀಸ್​ ಅಧಿಕಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Last Updated : Nov 3, 2020, 12:22 PM IST

ABOUT THE AUTHOR

...view details