ನವದೆಹಲಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಚಾಲನೆ ದೊರೆತಿದ್ದು, ಪ್ರಮುಖ ನಾಯಕರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಲೋಕಸಮರದಲ್ಲಿ ಪ್ರಮುಖ ನಾಯಕರಿಂದ ಹಕ್ಕು ಚಲಾವಣೆ
ದೇಶದ 20 ರಾಜ್ಯಗಳ 91 ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದ್ದು. ಬೆಳಗ್ಗೆ 7ರಿಂದ ಮತದಾನ ಪ್ರಕ್ರಿಯೆ ಆರಂಭವಾಗಿದೆ.
ಮತದಾನ
ಹಕ್ಕು ಚಲಾಯಿಸಿದ ಪ್ರಮುಖರು:
- ಜಗನ್ಮೋಹನ ರೆಡ್ಡಿ(ವೈಎಸ್ಆರ್ ಕಾಂಗ್ರೆಸ್): ಕಡಪ
- ಚಂದ್ರಬಾಬು ನಾಯ್ಡು(ಟಿಡಿಪಿ): ಅಮರಾವತಿ
- ಮೋಹನ್ ಭಾಗವತ್(ಆರ್ಸ್ಸೆಸ್ ಮುಖ್ಯಸ್ಥ): ನಾಗ್ಪುರ
- ತ್ರೀವೇಂದ್ರ ಸಿಂಗ್(ಉತ್ತರಾಖಂಡ ಸಿಎಂ): ಡೆಹ್ರಾಡೂನ್
- ಅಸಾದುದ್ದೀ ಓವೈಸಿ(ಎಐಎಂಐಎಂ) :ಹೈದರಾಬಾದ್
- ಪವನ್ ಕಲ್ಯಾಣ್( ಜನಸೇನಾ ಪಕ್ಷ) : ಹೈದರಾಬಾದ್
- ನಟ ಚಿರಂಜೀವಿ: ಹೈದರಾಬಾದ್
- ನಿತಿನ್ ಗಡ್ಕರಿ( ಬಿಜೆಪಿ): ನಾಗ್ಪುರ
- ಕೆ.ಕವಿತಾ(ಟಿಆರ್ಎಸ್): ನಿಜಾಮಾಬಾದ್
ಸದ್ಯ ಬೆಳಗ್ಗೆ 10 ಗಂಟೆವರೆಗಿನ ಮತದಾನ ಪ್ರಕ್ರಿಯೆಯಲ್ಲಿ ಈ ಎಲ್ಲ ಪ್ರಮುಖರು ಮತ ಚಲಾಯಿಸಿದ್ದು ನಿಧಾನವಾಗಿ ಎಲ್ಲೆಡೆ ಮತದಾನ ಬಿರುಸು ಪಡೆಯುತ್ತಿದೆ.
Last Updated : Apr 11, 2019, 10:48 AM IST