ಅಜ್ಮೇರ್ (ರಾಜಸ್ಥಾನ): ತನಗೆ ಪ್ರಾಧ್ಯಾಪಕ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿನಿವೋರ್ವಳು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಆಜ್ಮೇರ್ನ ಕಾಲೇಜೊಂದರಲ್ಲಿ ನಡೆದಿದೆ. ತನ್ನ ಪ್ರಾಧ್ಯಾಪಕನ ವಿರುದ್ಧವೇ ವಿದ್ಯಾರ್ಥಿನಿ ದೂರು ನೀಡಿದ್ದಾಳೆ.
ಲೈಂಗಿಕ ಕಿರುಕುಳ ಆರೋಪ: ಪ್ರಾಧ್ಯಾಪಕನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ವಿದ್ಯಾರ್ಥಿನಿ - ಪ್ರಾಧ್ಯಾಪಕನ ದೂರು ನೀಡಿ ನೀಡಿದ ವಿದ್ಯಾರ್ಥಿನಿ
ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಪ್ರಾಧ್ಯಾಪಕನೋರ್ವನ ವಿರುದ್ಧ ದೂರು ದಾಖಲಾಗಿದೆ. ತನ್ನ ಅಣತಿಯಂತೆ ನಡೆದುಕೊಳ್ಳದ್ದಕ್ಕೆ ಪರೀಕ್ಷೆಯಲ್ಲಿ ಅನುತ್ತೀರ್ಣ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂಬ ಆರೋಪ ಕೇಳಿಬಂದಿದೆ.
ವಿದ್ಯಾರ್ಥಿನಿಗೆ ಪ್ರಾಧ್ಯಾಪಕ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ ಆಕೆಯನ್ನು ಪರೀಕ್ಷೆಯಲ್ಲಿ ಅನುತ್ತೀರ್ಣ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗುತ್ತಿದೆ. ಈ ಕುರಿತಂತೆ ಪ್ರೊಫೆಸರ್ ವಿರುದ್ಧ ಇದೀಗ ದೂರು ದಾಖಲಾಗಿದೆ.
ಪ್ರಾಧ್ಯಾಪಕನು ವಿದ್ಯಾರ್ಥಿನಿಗೆ ತನ್ನೊಂದಿಗೆ ಮಾತನಾಡುವಂತೆ ಪೀಡಿಸುತ್ತಿದ್ದ. ಅಲ್ಲದೇ ವಿಡಿಯೋ ಕರೆಗಳನ್ನು ಮಾಡುವುದು, ಅಶ್ಲೀಲ ಸಂದೇಶಗಳನ್ನು ಕಳಿಸಿದ್ದಾನೆ. ಅವನ ಮಾತಿಗೆ ಒಪ್ಪದಿದ್ದಾಗ ಪರೀಕ್ಷೆಯಲ್ಲಿ ಅನುತ್ತೀರ್ಣ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಆತಂಕಕ್ಕೊಳಗಾದ ವಿದ್ಯಾರ್ಥಿನಿ ಪ್ರಾಧ್ಯಾಪಕನ ದೂರು ನೀಡಿದ್ದಾಳೆ ಹಿರಿಯ ಪೊಲೀಸ್ ಅಧಿಕಾರಿ ರವೀಂದರ್ ಸಿಂಗ್ ಹೇಳಿದ್ದಾರೆ.