ಕರ್ನಾಟಕ

karnataka

ETV Bharat / bharat

ಚಂದ್ರಯಾನ- 2ರ ಇಸ್ರೋ ವಿಜ್ಞಾನಿಗಳಿಗೆ ನೊಬೆಲ್​ ವಿಜೇತ ಕೊಟ್ರು ಮಹತ್ವದ ಟಿಪ್ಸ್​ - ISRO news

ಇಸ್ರೋ ವಿಜ್ಞಾನಿಗಳು ಚಂದಿರನ ದಕ್ಷಿಣ ಧ್ರುವದ ಮೇಲೆ ಇಳಿಯುವ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಯೋಜನೆ ರೂಪಿಸಿತ್ತು. ಕೊನೆಯ 11 ನಿಮಿಷದಲ್ಲಿ ಇಸ್ರೋದಿಂದ ಸಂಪರ್ಕ ಕಡಿದುಕೊಂಡ ಲ್ಯಾಂಡರ್​, ವಿಜ್ಞಾನಿಗಳ ನಿರೀಕ್ಷೆ ಹುಸಿಯಾಗಿಸಿತ್ತು. ಈ ಬಗ್ಗೆ ನೊಬೆಲ್ ಪ್ರಶಸ್ತಿ ವಿಜೇತ ಸರ್ಜ್​ ಹರೋಕೆ ಅವರು, ಮುಂದೆ ಏನಾಗಲಿದೆ ಎಂಬ ಪ್ರಶ್ನೆ ಕೇವಲ ವೈಜ್ಞಾನಿಕ ವಿಷಯವಲ್ಲ. ಇದು ರಾಜಕೀಯ ಮತ್ತು ಆರ್ಥಿಕ ಸಮಸ್ಯೆಯಾಗಿದೆ. ಸಮಸ್ಯೆ ಎಲ್ಲಿದೆ ಎಂಬುದನ್ನು ಗುರುತಿಸಿ ಅದನ್ನು ಸರಿಪಡಿಸಿ, ಮತ್ತೊಂದು ಯೋಜನೆಯತ್ತ ಪ್ರಯತ್ನಿಸಿ ಎಂದು ಕಿವಿಮಾತು ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ

By

Published : Sep 15, 2019, 8:41 PM IST

ನವದೆಹಲಿ: ಸವಾಲುಗಳು, ಅಪಘಾತಗಳು ಮತ್ತು ಆಶ್ಚರ್ಯಗಳು ಸಂಶೋಧನೆಯನ್ನು ಇನ್ನಷ್ಟು ತೀಕ್ಷ್ಣಗೊಳಿಸುತ್ತವೆ ಎಂದು ಪ್ರತಿಪಾದಿಸಿರುವ ಫ್ರೆಂಚ್ ಭೌತವಿಜ್ಞಾನಿ ಮತ್ತು 2012ರ ನೊಬೆಲ್ ಪ್ರಶಸ್ತಿ ವಿಜೇತ ಸರ್ಜ್​ ಹರೋಕೆ ಅವರು, 'ಚಂದ್ರನ ದಕ್ಷಿಣ ಧ್ರುವದ ಮೇಲೆ ಸುರಕ್ಷಿತ ಲ್ಯಾಂಡರ್​ ಇಳಿಸುವಿಕೆಯ ಕೊನೇ ಕ್ಷಣದಲ್ಲಿ ಲ್ಯಾಂಡರ್‌ ಸಂಪರ್ಕ ಕಡಿದುಕೊಂಡಿದೆ. ಈ ಉಡ್ಡಯನದ ಆನಂದವನ್ನು ಅನುಭವಿಸಿ ಮುಂದಿನ ಯೋಜನೆಯತ್ತ ದೃಷ್ಟಿಹರಿಸುವಂತೆ' ಅವರು ಇಸ್ರೋ ವಿಜ್ಞಾನಿಗಳಿಗೆ ಸಲಹೆ ನೀಡಿದ್ದಾರೆ.

75 ವರ್ಷದ ಫ್ರೆಂಚ್ ಭೌತವಿಜ್ಞಾನಿ ಹರೋಕೆ ಅವರು, 2012ರಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ ನೊಬೆಲ್​ ಪ್ರಶಸ್ತಿ ಪುರಸ್ಕೃತರು. 'ಚಂದ್ರಯಾನ -2 ಯೋಜನೆಯು ಅತಿದೊಡ್ಡ ವಿಜ್ಞಾನ ಯೋಜನೆಯಾಗಿದೆ. ಇಂತಹ ಯೋಜನೆಯಲ್ಲಿ ಸಾಮಾನ್ಯವಾಗಿಯೇ ಸರ್ಕಾರವು ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಂಡಿದೆ' ಎಂದು ಬಣ್ಣಿಸಿದ್ದಾರೆ.

ಪ್ರತಿಷ್ಠಿತ ಯೋಜನೆಯು ಬಹಳಷ್ಟು ಹಣ ಬೇಡುತ್ತದೆ. ಯೋಜನೆ ವಿಫಲವಾದಾಗ ಅಥವಾ ಅಪಘಾತಕ್ಕೀಡಾದಾಗ ಸಾಕಷ್ಟು ನಿರಾಸೆಯುಂಟು ಮಾಡುತ್ತದೆ. ಏಕೆಂದರೆ, ಈ ಬಗ್ಗೆ ಮಾಧ್ಯಮಗಳು ಸಾಕಷ್ಟು ಗಮನ ಸೆಳೆಯುವಂತೆ ಮಾಡಿರುತ್ತವೆ ಎಂದು ಹರೋಕೆ ಹೇಳಿದ್ದಾರೆ.

ನಾನು ನನ್ನ ಸಂಶೋಧನೆಗಳನ್ನು ಕೈಗೊಂಡಾಗ ಅಂತಿಮ ಫಲಿತಾಂಶ ಪಡೆಯುವವರೆಗೂ ಯಾರೂ ಆ ಬಗ್ಗೆ ಆಸಕ್ತಿ ಹೊಂದಿರಲಿಲ್ಲ. ಈ ರೀತಿಯ ಸಮಸ್ಯೆಗಳು, ಅಪಘಾತಗಳು ಮತ್ತು ಆಶ್ಚರ್ಯಗಳು ಸಂಶೋಧನೆಯನ್ನು ತೀಕ್ಷ್ಣಗೊಳಿಸುತ್ತವೆ ಎಂದು ಹರೋಕೆಯವರು ಇಸ್ರೋ ವಿಜ್ಞಾನಿಗಳಿಗೆ ತಮ್ಮ ವೈಫಲ್ಯದಿಂದ ಕಂಡುಕೊಂಡ ಪಾಠವನ್ನು ವಿವರಿಸಿದ್ದಾರೆ.

ಮುಂದೆ ಏನಾಗಲಿದೆ ಎಂಬ ಪ್ರಶ್ನೆ ಕೇವಲ ವೈಜ್ಞಾನಿಕ ವಿಷಯವಲ್ಲ. ಇದು ರಾಜಕೀಯ ಮತ್ತು ಆರ್ಥಿಕ ಸಮಸ್ಯೆಯಾಗಿದೆ. ಸಮಸ್ಯೆ ಎಲ್ಲಿದೆ ಎಂಬುದನ್ನು ಗುರುತಿಸಿ ಅದನ್ನು ಸರಿಪಡಿಸಿ ಮತ್ತೆ ಪ್ರಯತ್ನಿಸಿ ಎಂದು ವಿಜ್ಞಾನಿಗಳಿಗೆ ಸಲಹೆ ನೀಡಿದ್ದಾರೆ.

ABOUT THE AUTHOR

...view details