ಕರ್ನಾಟಕ

karnataka

ETV Bharat / bharat

ತನಿಖಾ ಸಂಸ್ಥೆಗಳು ನನ್ನ ತಂದೆಯ ಸಮಾಧಿ ಮೇಲೆ ಲೆಕ್ಕ ಪರಿಶೋಧನೆ ಮಾಡುತ್ತಿವೆ: ಮೆಹಬೂಬ ಮುಫ್ತಿ - ತನಿಖಾ ಸಂಸ್ಥೆಗಳ ವಿರುದ್ಧ ಮೆಹಬೂಬ ಮುಫ್ತಿ ಆಕ್ರೋಶ

ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮುಫ್ತಿ, ತನಿಖಾ ಸಂಸ್ಥೆಗಳು ನನ್ನ ತಂದೆಯ ಸಮಾಧಿಯ ಮೇಲೆ ಲೆಕ್ಕಪರಿಶೋಧನೆ ನಡೆಸುತ್ತಿರುವುದು ಅಸಹ್ಯಕರ ಮತ್ತು ಖೇದಕ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Mehbooba Mufti outrage against investigating agencies
ಮೆಹಬೂಬ ಮುಫ್ತಿ ವಿರುದ್ಧ ಎನ್​ಐಎ , ಇಡಿ ತನಿಖೆ

By

Published : Jan 3, 2021, 9:02 PM IST

ಶ್ರೀನಗರ (ಜಮ್ಮು ಕಾಶ್ಮೀರ ) : "ಅವರು ಒಂದೇ ಒಂದು ಪ್ರಕರಣವನ್ನು ಸಾಬೀತುಪಡಿಸಲಿ, ಅದರ ಪರಿಣಾಮಗಳನ್ನು ಎದುರಿಸಲು ನಾನು ಸಿದ್ಧಳಿದ್ದೇನೆ" ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಎನ್ಐಎ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿರುವ ಪ್ರಕರಣಗಳ ಕುರಿತು ಪ್ರತಿಕ್ರಿಯಿಸಿದ್ದಾರೆ.

ತನಿಖಾ ಸಂಸ್ಥೆಗಳು ನನ್ನ ತಂದೆ ಮುಫ್ತಿ ಮೊಹಮ್ಮದ್ ಸಯೀದ್ ಅವರ ಸಮಾಧಿಯ ಮೇಲೆ "ಲೆಕ್ಕಪರಿಶೋಧನೆ" ನಡೆಸುತ್ತಿರುವುದು ಖೇದಕರ. ತನಿಖಾ ಸಂಸ್ಥೆಗಳು ಕಳೆದ ಎರಡು ವರ್ಷಗಳಿಂದ ನನ್ನ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸುತ್ತಿದ್ದರೂ, ಇದುವರೆಗೂ ಏನೂ ಸಿಕ್ಕಿಲ್ಲ ಎಂದು ಪಿಡಿಪಿ ಯುವ ವಿಭಾಗದ ನಾಯಕ ವಹೀದ್ ಪರ್ರಾನನ್ನು ಎನ್‌ಐಎ ಬಂಧಿಸಿದ ನಂತರ ಮುಫ್ತಿ ತನ್ನ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಓದಿ : ಎಲ್ಲಾ ದೇಶಗಳಿಗೆ ಕೊವ್ಯಾಕ್ಸಿನ್ ಲಸಿಕೆ ನೀಡುವುದು ನಮ್ಮ ಉದ್ದೇಶ: ಭಾರತ್ ಬಯೋಟೆಕ್ ಸಿಎಂಡಿ

ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮುಫ್ತಿ, ತನಿಖಾ ಸಂಸ್ಥೆಗಳು ನನ್ನ ಮೃತ ತಂದೆಯ ಸಮಾಧಿಯ ಮೇಲೆ ಲೆಕ್ಕಪರಿಶೋಧನೆ ನಡೆಸುತ್ತಿರುವುದು ಅಸಹ್ಯಕರ ಮತ್ತು ಖೇದಕರ ಎಂದಿದ್ದಾರೆ.

For All Latest Updates

TAGGED:

ABOUT THE AUTHOR

...view details