ಲಖನೌ(ಉತ್ತರಪ್ರದೇಶ):ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕೋಟಾ ಆಸ್ಪತ್ರೆಯ ದುರಂತದ ಬಗ್ಗೆ ಗಮನ ಹರಿಸದೆ ಖಾಸಗಿ ಭೇಟಿಗಾಗಿ ಜೈಪುರಕ್ಕೆ ಬಂದ ಕಾರಣ ಅವರ ವಿರುದ್ಧ ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ವಾಗ್ದಾಳಿ ನಡೆಸಿದ್ದಾರೆ.
ಕೋಟಾದ ಸರ್ಕಾರಿ ಆಸ್ಪತ್ರೆಯಲ್ಲಿ 100 ಕ್ಕೂ ಹೆಚ್ಚು ಶಿಶುಗಳು ಸಾವನ್ನಪ್ಪಿದ್ದಾರೆ.ಕಾಂಗ್ರೆಸ್ ಮುಖಂಡರು ಆಗಾಗ್ಗೆ ಉತ್ತರಪ್ರದೇಶಕ್ಕೆ ಬಂದು ಮೊಸಳೆ ಕಣ್ಣೀರು ಸುರಿಸುತ್ತಾರೆ.ಆದರೆ, ರಾಜಸ್ಥಾನದಲ್ಲಿ ನಿನ್ನೆ ತನ್ನ ಖಾಸಗಿ ಭೇಟಿಯ ಸಮಯದಲ್ಲಿ ಕೋಟಾದ ಮಕ್ಕಳ ತಾಯಂದಿರ ಕಣ್ಣೀರನ್ನು ಒರೆಸಲು ಸ್ವಲ್ಪ ಸಮಯವನ್ನು ನೀಡುವುದು ಸೂಕ್ತವೆಂದು ಅವರು ಪರಿಗಣಿಸಿಲ್ಲ. ಇದು ಅತ್ಯಂತ ದುರದೃಷ್ಟಕರ "ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.