ಕರ್ನಾಟಕ

karnataka

ETV Bharat / bharat

ಯೋಗಿ ಸರ್ಕಾರಕ್ಕೆ ಅಭದ್ರತೆ ಭೀತಿಯಿಂದ ಪ್ರಿಯಾಂಕಾ ಗಾಂಧಿ ಬಂಧನ: ರಾಹುಲ್ ವಾಗ್ದಾಳಿ -

ಸೋನಭದ್ರಾ ಜಿಲ್ಲೆಯಲ್ಲಿ ಭೂ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನಡೆದ ಪೊಲೀಸ್ ಗೋಲಿಬಾರ್​ನಲ್ಲಿ ಗಾಯಗೊಂಡವರ ಭೇಟಿಗೆ ತೆರೆಳುತ್ತಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ಉತ್ತರ ಪ್ರದೇಶದ ಪೊಲೀಸರು ವಾರಣಾಸಿಯ ನಾರಾಯಣ್​ಪುರದಲ್ಲಿ ವಶಕ್ಕೆ ಪಡೆದಿದ್ದಾರೆ. ಇದಕ್ಕೆ ರಾಹುಲ್​ ಗಾಂಧಿ ಟ್ವಿಟ್ಟರ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.

ಸಾಂದರ್ಭಿಕ ಚಿತ್ರ

By

Published : Jul 19, 2019, 7:03 PM IST

ನವದೆಹಲಿ:ಉತ್ತರ ಪ್ರದೇಶದ ಯೋಗಿ ಆದಿತ್ಯನಾತ್ ಸರ್ಕಾರ ತನ್ನ ಹದ್ದು ಮೀರಿ ವರ್ತಿಸುತ್ತಿದೆ ಹಾಗೂ ಅಭದ್ರತೆಯ ಭೀತಿಯಿಂದ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಲಾಗಿದೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ ಆರೋಪಿಸಿದ್ದಾರೆ.

ಸೋನಭದ್ರಾ ಜಿಲ್ಲೆಯಲ್ಲಿ ಭೂ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನಡೆದ ಪೊಲೀಸ್ ಗೋಲಿಬಾರ್​ನಲ್ಲಿ ಗಾಯಗೊಂಡವರ ಭೇಟಿಗೆ ತೆರೆಳುತ್ತಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ಉತ್ತರ ಪ್ರದೇಶದ ಪೊಲೀಸರು ವಾರಣಾಸಿಯ ನಾರಾಯಣ್​ಪುರದಲ್ಲಿ ಬಂಧಿಸಿದ್ದಾರೆ.

ತಮ್ಮ ಭೂಮಿ ನೀಡಲು ನಿರಾಕರಿಸಿದ 10 ಆದಿವಾಸಿ ರೈತರು ಮೇಲೆ ಗುಂಡು ಹಾರಿಸಿರುವುದನ್ನು ನೋಡಿದರೆ ಉತ್ತರ ಪ್ರದೇಶದಲ್ಲಿನ ಬಿಜೆಪಿ ಸರ್ಕಾರಕ್ಕೆ ಅಭದ್ರತೆ ಭಯ ಕಾಡುತ್ತಿದೆ ಎಂಬುದನ್ನು ಸ್ಪಷ್ಟವಾಗಿದೆ ಎಂದು ರಾಹುಲ್​ ಗಾಂಧಿ ಟ್ವಿಟ್ಟರ್​ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details