ಕರ್ನಾಟಕ

karnataka

ETV Bharat / bharat

ಯೋಗಿಗೆ ಪ್ರಿಯಾಂಕಾ ಪತ್ರ : ಯುಪಿಯಲ್ಲಿ 'ಗೋಮಾತೆ' ಸ್ಥಿತಿ ಬಗ್ಗೆ ಕೈ ನಾಯಕಿ ಕಳವಳ! - ಹಸುಗಳ ಬಗ್ಗೆ ಪ್ರಿಯಾಂಕಾ ಕಳವಳ

ಉತ್ತರ ಪ್ರದೇಶದಲ್ಲಿ ಹಸುಗಳ ಸಂತತಿಯನ್ನು ಕಾಪಾಡುವ ಭರವಸೆ ನೀಡಿದ್ದ ಯೋಗಿ ಆದಿತ್ಯನಾಥ್​ ಮುಗ್ಧ ಪ್ರಾಣಿಗಳನ್ನು ನೋಡಿಕೊಳ್ಳಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

Priyanka Gandhi writes to Yogi Adityanath
ಯೋಗಿಗೆ ಪ್ರಿಯಾಂಕಾ ಗಾಂಧಿ ಪತ್ರ

By

Published : Dec 21, 2020, 1:59 PM IST

ಲಖನೌ(ಉತ್ತರ ಪ್ರದೇಶ): ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದು, ಉತ್ತರ ಪ್ರದೇಶದಲ್ಲಿನ ರಾಜ್ಯದಲ್ಲಿ ಹಸುಗಳ ಸ್ಥಿತಿಗತಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಪತ್ರದ ಪ್ರತಿಯನ್ನು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದು, ಲಲಿತ್‌ಪುರದ ಸೌಜ್ನಾದಲ್ಲಿನ "ಗೋಮಾತೆ" ಕಳೆಬರಹಗಳ ಛಾಯಾಚಿತ್ರಗಳನ್ನು ನೋಡಿದ ನಂತರ ನನ್ನ ಮನಸಿಗೆ ನೋವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇಲ್ಲಿಯವರೆಗೆ ಘಟನೆಗಳ ವಿವರಗಳು ಹಸುಗಳು ಮೃತಪಟ್ಟ ಸಂದರ್ಭಗಳ ಬಗ್ಗೆ ಪತ್ತೆ ಹಚ್ಚಲಾಗಿಲ್ಲ. ಆದರೆ ಮೇವು ಮತ್ತು ನೀರಿನ ಕೊರತೆಯಿಂದ ಸಾವು ಸಂಭವಿಸಿವೆ ಎಂದು ಛಾಯಾಚಿತ್ರಗಳು ತೋರಿಸುತ್ತವೆ ಎಂದಿದ್ದಾರೆ.

"ಇದಕ್ಕೂ ಮೊದಲೇ, ರಾಜ್ಯದ ವಿವಿಧ ಭಾಗಗಳಲ್ಲಿ ಇಂತಹ ಚಿತ್ರಗಳು ಕಂಡುಬಂದಿವೆ. ಪ್ರತಿ ಬಾರಿಯೂ ಅವುಗಳ ಬಗ್ಗೆ ಸ್ವಲ್ಪ ಸಮಯದವರೆಗೆ ಚರ್ಚಿಸಲಾಗುತ್ತದೆಯಾದರೂ, ಈ ಮುಗ್ಧ ಪ್ರಾಣಿಗಳನ್ನು ನೋಡಿಕೊಳ್ಳಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಇದಕ್ಕೆ ಯಾರು ಹೊಣೆ? ಎಂಬ ಪ್ರಶ್ನೆ ಉದ್ಭವಿಸುತ್ತದೆ" ಎಂದು ಪ್ರಿಯಾಂಕಾ ಹೇಳಿದ್ದಾರೆ.

ಅಧಿಕಾರಕ್ಕೆ ಬರುವ ಸಮಯದಲ್ಲಿ ಯೋಗಿ ಆದಿತ್ಯನಾಥ್ ಅವರು "ಹಸುಗಳ ಸಂತತಿ" ರಕ್ಷಿಸುವ ಮತ್ತು ಗೋಶಾಲೆಗಳನ್ನು ನಿರ್ಮಿಸುವ ಬಗ್ಗೆ ಮಾತನಾಡಿದ್ದರು. ಆದರೆ ವಾಸ್ತವವೆಂದರೆ ಸರ್ಕಾರದ ಪ್ರಯತ್ನಗಳು ಸಂಪೂರ್ಣವಾಗಿ ವಿಫಲವಾಗಿವೆ. ಗೋಶಾಲೆಗಳನ್ನು ತೆರಯಲಾಗಿದೆ ಆದರೆ ಮೇವು ಮತ್ತು ನೀರು ಮಾತ್ರವಲ್ಲದೆ ಹಸು-ಸಂತತಿಯ ಬಗ್ಗೆ ಯಾವುದೇ ಸೂಕ್ಷ್ಮತೆಯಿಲ್ಲ. ಹಲವಾರು ಅಧಿಕಾರಿಗಳು ಮತ್ತು ಗೋಶಾಲೆ ನಿರ್ವಾಹಕರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ರಾಜ್ಯದಲ್ಲಿ ಪ್ರತಿದಿನ ಅನೇಕ ಹಸುಗಳು ಹಸಿವಿನಿಂದ ಸಾಯುತ್ತಿವೆ ಎಂದು ಪ್ರಿಯಾಂಕಾ ಆರೋಪಿಸಿದ್ದಾರೆ.

ABOUT THE AUTHOR

...view details