ನವದೆಹಲಿ :ವಿದೇಶಗಳಲ್ಲಿರುವ ಭಾರತೀಯರಿಗೆ ಯಾವುದೇ ಶುಲ್ಕ ವಿಧಿಸದೆ ಭಾರತಕ್ಕೆ ಕರೆತರುವ ಕೇಂದ್ರ ಸರ್ಕಾರ, ವಲಸೆ ಕಾರ್ಮಿಕರಿಂದ ಟಿಕೆಟ್ ಶುಲ್ಕ ವಸೂಲಿ ಮಾಡುತ್ತಿರುವುದೇಕೆ ಎಂದು ಕಿಡಿ ಕಾರಿದ್ದಾರೆ.
ವಲಸೆ ಕಾರ್ಮಿಕರಿಂದ ಟಿಕೆಟ್ ಶುಲ್ಕ ವಸೂಲಿಗೆ ಪ್ರಿಯಾಂಕಾ ವಾದ್ರಾ ಖಂಡನೆ.. - ಸೋನಿಯಾ ಗಾಂಧಿ
"ಕಾರ್ಮಿಕರು ದೇಶ ನಿರ್ಮಾತೃಗಳು. ಆದರೆ, ಇವತ್ತು ಅವರೆಲ್ಲ ಸಂಕಷ್ಟದ ಸ್ಥಿತಿಯಲ್ಲಿರುವುದು ನಮ್ಮೆಲ್ಲರ ದೌರ್ಭಾಗ್ಯ. ವಿದೇಶಗಳಲ್ಲಿರುವ ಭಾರತೀಯರನ್ನು ಉಚಿತವಾಗಿ ವಿಮಾನದ ಮೂಲಕ ಮರಳಿ ಕರೆತರಬಹುದು, ನಮಸ್ತೆ ಟ್ರಂಪ್ ಸಭೆಗೆ 100 ಕೋಟಿ ರೂ. ಖರ್ಚು ಮಾಡಬಹುದು. ಆದರೆ ಕೊರೊನಾ ವೈರಸ್ನ ಲಾಕ್ಡೌನ್ ಸಮಯದಲ್ಲಿ ಕಾರ್ಮಿಕರಿಗೆ ಮಾತ್ರ ಉಚಿತ ರೈಲು ಪ್ರಯಾಣ ಸೌಲಭ್ಯ ನೀಡುವುದಿಲ್ಲ ಎಂದರೆ ಏನರ್ಥ?" ಎಂದು ಪ್ರಿಯಾಂಕಾ ವಾಗ್ದಾಳಿ ನಡೆಸಿದ್ದಾರೆ..

"ಕಾರ್ಮಿಕರು ದೇಶ ನಿರ್ಮಾತೃಗಳು. ಆದರೆ, ಇವತ್ತು ಅವರೆಲ್ಲ ಸಂಕಷ್ಟದ ಸ್ಥಿತಿಯಲ್ಲಿರುವುದು ನಮ್ಮೆಲ್ಲರ ದೌರ್ಭಾಗ್ಯ. ವಿದೇಶಗಳಲ್ಲಿರುವ ಭಾರತೀಯರನ್ನು ಉಚಿತವಾಗಿ ವಿಮಾನದ ಮೂಲಕ ಮರಳಿ ಕರೆತರಬಹುದು. ನಮಸ್ತೆ ಟ್ರಂಪ್ ಸಭೆಗೆ 100 ಕೋಟಿ ರೂ. ಖರ್ಚು ಮಾಡಬಹುದು. ಆದರೆ, ಕೊರೊನಾ ವೈರಸ್ನ ಲಾಕ್ಡೌನ್ ಸಮಯದಲ್ಲಿ ಕಾರ್ಮಿಕರಿಗೆ ಮಾತ್ರ ಉಚಿತ ರೈಲು ಪ್ರಯಾಣ ಸೌಲಭ್ಯ ನೀಡುವುದಿಲ್ಲ ಎಂದರೆ ಏನರ್ಥ?" ಎಂದು ಪ್ರಿಯಾಂಕಾ ವಾಗ್ದಾಳಿ ನಡೆಸಿದ್ದಾರೆ.
"ತಮ್ಮೂರಿಗೆ ಮರಳ ಬಯಸುವ ಎಲ್ಲಾ ವಲಸೆ ಕಾರ್ಮಿಕರ ಪ್ರಯಾಣ ವೆಚ್ಚವನ್ನು ಕಾಂಗ್ರೆಸ್ ಪಕ್ಷ ಭರಿಸಲಿದೆ" ಎಂದು ಅವರು ಹೇಳಿದ್ದಾರೆ. ಇದಕ್ಕೂ ಮುನ್ನ ಸೋಮವಾರ ಬೆಳಗ್ಗೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ವಲಸೆ ಕಾರ್ಮಿಕರ ಪ್ರಯಾಣ ವೆಚ್ಚವನ್ನು ಕಾಂಗ್ರೆಸ್ ಪಕ್ಷ ಭರಿಸಲಿರುವುದಾಗಿ ಪ್ರಕಟಣೆಯ ಮೂಲಕ ತಿಳಿಸಿದ್ದರು.