ಕರ್ನಾಟಕ

karnataka

ETV Bharat / bharat

ಇಂದಿರಾ ಗಾಂಧಿಯವರ 36ನೇ ಪುಣ್ಯತಿಥಿ: ಮೋದಿ, ರಾಗಾ, ಪ್ರಿಯಾಂಕಾರಿಂದ ನಮನ - Rahul gandhi twitter

ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರ 36ನೇ ಪುಣ್ಯತಿಥಿ ಹಿನ್ನೆಲೆ ಗಣ್ಯರು ನಮಿಸಿದ್ದಾರೆ.

Indira Gandhi
ಇಂದಿರಾ ಗಾಂಧಿ ಅವರ 36ನೇ ಪುಣ್ಯತಿಥಿ

By

Published : Oct 31, 2020, 11:10 AM IST

ನವದೆಹಲಿ:ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 36ನೇ ಪುಣ್ಯತಿಥಿ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಗೌರವ ಸಲ್ಲಿಸಿದರು.

"ನಮ್ಮ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಜೀ ಅವರ ಪುಣ್ಯತಿಥಿಯಂದು ಅವರಿಗೆ ನಮನ" ಎಂದು ಪಿಎಂ ಮೋದಿ ಟ್ವೀಟ್ ಮಾಡಿದ್ದಾರೆ. ಕಳೆದ ಭಾನುವಾರವೂ ಸಹ ತಮ್ಮ 'ಮನ್​ ಕಿ ಬಾತ್​' ರೇಡಿಯೋ ಕಾರ್ಯಕ್ರಮದಲ್ಲಿ "ಅಕ್ಟೋಬರ್ 31ರಂದು ನಾವು ಭಾರತದ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯನ್ನು ಕಳೆದುಕೊಂಡೆವು. ನಾನು ಅವರಿಗೆ ಗೌರವಯುತವಾಗಿ ನಮನ ಸಲ್ಲಿಸುತ್ತೇನೆ" ಎಂದು ಹೇಳಿದ್ದರು.

ಇಂದಿರಾ ಗಾಂಧಿಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ನಮನ

ಇಂದಿರಾ ಗಾಂಧಿ ಅವರ ಮೊಮ್ಮಗಳಾಗಿರುವ ಕೈ ನಾಯಕಿ ಪ್ರಿಯಾಂಕಾ ಗಾಂಧಿ, ದೆಹಲಿಯ ಶಕ್ತಿ ಸ್ಥಳದಲ್ಲಿರುವ ಇಂದಿರಾ ಗಾಂಧಿ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ.

ಇಂದಿರಾ ಗಾಂಧಿ ಅವರ ಮೊಮ್ಮಗ ರಾಹುಲ್​ ಗಾಂಧಿ ಅಜ್ಜಿಯ ಫೋಟೋವೊಂದನ್ನು ಶೇರ್​ ಮಾಡಿ ಟ್ವೀಟ್​ ಮಾಡಿದ್ದಾರೆ. "ಅಸತೋಮ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ, ಮೃತ್ಯೋರ್ಮಾ ಅಮೃತಂಗಮಯ.. (ಸುಳ್ಳಿನಿಂದ ಸತ್ಯದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ, ಸಾವಿನಿಂದ ಜೀವನದೆಡೆಗೆ) ಈ ಪದಗಳ ಅರ್ಥದೊಂದಿಗೆ ಜೀವಿಸುವುದನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳು ದಾದಿ" ಎಂದು ರಾಗಾ ಹೇಳಿದ್ದಾರೆ.

ಇಂದಿರಾ ಗಾಂಧಿ ಅವರು ಭಾರತದ ಮೊದಲ ಹಾಗೂ ದೀರ್ಘ ಕಾಲ (1966-1977, 1980-1984) ದೇಶವನ್ನಾಳಿದ ಮಹಿಳಾ ಪ್ರಧಾನಿಯಾಗಿದ್ದಾರೆ. 1984ರ ಅಕ್ಟೋಬರ್ 31ರಂದು ಅಕ್ಬರ್ ರಸ್ತೆಯಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಅವರ ಅಂಗರಕ್ಷಕರಿಂದಲೇ ಹತ್ಯೆಗೀಡಾಗಿದ್ದರು.

ABOUT THE AUTHOR

...view details