ನವದೆಹಲಿ:ಹಥ್ರಾಸ್ ಪ್ರಕರಣದ ನಾಲ್ವರು ಆರೋಪಿಗಳ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ದೋಷಾರೋಪಣೆ ಮತ್ತು ಕೊಲೆ ಆರೋಪದ ಚಾರ್ಜ್ಶಿಟ್ ಸಲ್ಲಿಸಿದ ಕೆಲವೇ ಗಂಟೆಗಳ ನಂತರ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಹರಿಹಾಯ್ದುರು. 'ಬಲಿಪಶುವಿನ ಘನತೆಯನ್ನು ನಿರಾಕರಿಸಲು ಯಾವುದೇ ಅಡೆತಡೆಯಿಲ್ಲ' ಎಂದಿದ್ದಾರೆ.
ಸಿಬಿಐ ಚಾರ್ಜ್‌ಶೀಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡರು, ಮತ್ತೊಮ್ಮೆ ಸತ್ಯವು ಮೇಲುಗೈ ಸಾಧಿಸಿದೆ. ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ ಎಂದರು.
ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ಈ ಬೆಳವಣಿಗೆಯು ಉತ್ತರ ಪ್ರದೇಶದ ಆದಿತ್ಯನಾಥ್ ಸರ್ಕಾರ, ಯುಪಿ ಪೊಲೀಸ್, ಎಡಿಜಿಯ ಕಾನೂನು ಸುವ್ಯವಸ್ಥೆ, ಹಥ್ರಾಸ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ರಾಜ್ಯ ಆಡಳಿತದ ಹಿರಿಯ ಕಾರ್ಯಕರ್ತರ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಪ್ರಿಯಾಂಕಾ ವಾದ್ರಾ ಹೇಳಿದ್ದಾರೆ.