ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವರಿಷ್ಠೆಯಾದ ಪ್ರಿಯಾಂಕಾ ಗಾಂಧಿ ವಾದ್ರಾ, ಉದ್ಯಮಿ ರಾಬರ್ಟ್ ವಾದ್ರಾ ಹಾಗೂ ಅವರ ಪುತ್ರ ರೈಹಾನ್ ರಾಜೀವ್ ವಾದ್ರಾ ತಮ್ಮ ಹಕ್ಕು ಚಲಾಯಿಸಿದರು.
ರೈಹಾನ್ ವಾದ್ರಾ ಇದೇ ಮೊದಲ ಬಾರಿಗೆ ಮತದಾನ ಮಾಡಿ ಬಳಿಕ ಮಾತನಾಡಿ, ಪ್ರಜಾಪ್ರಭುತ್ವದ ಭಾಗವಾಗಿ ಮೊದಲ ಬಾರಿಗೆ ಮತದಾನ ಮಾಡಿದ್ದು ತುಂಬ ಸಂತೋಷವಾಗಿದೆ. ಪ್ರತಿಯೊಬ್ಬರ ಹಕ್ಕಾದ ಮತದಾನವನ್ನು ಎಲ್ಲರೂ ಮಾಡಲೇಬೇಕು ಎಂದರು.