ಕರ್ನಾಟಕ

karnataka

ETV Bharat / bharat

ಯೋಗಿ ನಾಡಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ: ಮಹತ್ವದ ಸಭೆ ಕರೆದ  ಪ್ರಿಯಾಂಕಾ ಗಾಂಧಿ - ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ

ವಿಕಾಸ್ ದುಬೆ ಬಂಧಿಸಲು ಹೋದ ಸಂದರ್ಭದಲ್ಲಿ ಎಂಟು ಮಂದಿ ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ ಘಟನೆಯ ನಂತರ, ಪ್ರತಿಪಕ್ಷಗಳಿಗೆ ಹೊಸ ಅಸ್ತ್ರ ಸಿಕ್ಕಿದೆ. ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚಿಸಲು ಹಾಗೂ ಹೋರಾಟ ರೂಪಿಸುವ ಹಿನ್ನೆಲೆಯಲ್ಲಿ ಸಲಹಾ ಗುಂಪು, ಸಿಎಲ್‌ಪಿ ನಾಯಕ, ಪಿಸಿಸಿ ಅಧ್ಯಕ್ಷ ಮತ್ತು ಇತರ ಪ್ರಮುಖ ನಾಯಕರ ಜೊತೆ ಪ್ರಿಯಾಂಕ ಚರ್ಚೆ ನಡೆಸಲಿದ್ದಾರೆ.

priyanka
ಪ್ರಿಯಾಂಕಾ ಗಾಂಧಿ

By

Published : Jul 4, 2020, 11:18 AM IST

ನವದೆಹಲಿ: ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಚರ್ಚಿಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಶನಿವಾರ ಉತ್ತರ ಪ್ರದೇಶ ಕಾಂಗ್ರೆಸ್ ಮುಖಂಡರ ವರ್ಚುವಲ್​ ಸಭೆ ಕರೆದಿದ್ದಾರೆ.

ರಾಜ್ಯದ ಅತ್ಯಂತ ಕುಖ್ಯಾತ ಅಪರಾಧಿಗಳಲ್ಲಿ ಒಬ್ಬನಾದ ವಿಕಾಸ್ ದುಬೆ ಅವರನ್ನು ಬಂಧಿಸಲು ಹೋದ ಸಂದರ್ಭದಲ್ಲಿ ಉಪ ಅಧೀಕ್ಷಕರು ಸೇರಿದಂತೆ ಕನಿಷ್ಠ ಎಂಟು ಮಂದಿ ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದರು ಮತ್ತು ಆರು ಪೊಲೀಸರು ಗಾಯಗೊಂಡಿದ್ದರು. ಈ ಘಟನೆಯ ನಂತರ ಕಾಂಗ್ರೆಸ್​​ ಸಲಹಾ ಗುಂಪು, ಸಿಎಲ್‌ಪಿ ನಾಯಕ, ಪಿಸಿಸಿ ಅಧ್ಯಕ್ಷ ಮತ್ತು ಇತರ ಪ್ರಮುಖ ನಾಯಕರು ಉತ್ತರಪ್ರದೇಶದಲ್ಲಿನ ಕಾನೂನು ಸುವ್ಯವಸ್ಥೆ ಕುರಿತು ಪ್ರಿಯಾಂಕಾ ಗಾಂಧಿ ಸಭೆಯಲ್ಲಿ ಚರ್ಚಿಸಲಿದ್ದಾರೆ.

ಪ್ರಾಣ ತ್ಯಾಗ ಮಾಡಿದ ಪೊಲೀಸರಿಗೆ ಗೌರವ ಸಲ್ಲಿಸಲು ಮತ್ತು ಅವರ ಕುಟುಂಬಗಳಿಗೆ ಒಗ್ಗಟ್ಟನ್ನು ತೋರಿಸಲು ರಾಜ್ಯ ಘಟಕವು ಪಕ್ಷದ ಕಾರ್ಯಕರ್ತರನ್ನು ತಮ್ಮ ಮನೆಗಳ ಹೊರಗೆ ಮೇಣದಬತ್ತಿಗಳನ್ನು ಹಚ್ಚುವಂತೆ ಕೇಳಿಕೊಂಡಿತ್ತು. ಕಾನ್ಪುರದ ಘಟನೆಯು ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಘಟನೆ ಬಗ್ಗೆ ಪ್ರತಿಪಕ್ಷಗಳು ಯೋಗಿ ನೇತೃತ್ವದ ಸರ್ಕಾರವನ್ನ ಹಿಗ್ಗಾಮುಗ್ಗಾ ಟೀಕೆಗೆ ಗುರಿಪಡಿಸಿವೆ.

"ಕಾನ್ಪುರದಲ್ಲಿ ನಡೆದ ಭೀಕರ ಘಟನೆಯ ನಂತರ, ಪ್ರಯಾಗರಾಜ್‌ನಲ್ಲಿ ಒಂದು ಕುಟುಂಬದ ನಾಲ್ಕು ಜನರು ಕೊಲ್ಲಲ್ಪಟ್ಟ ಮತ್ತೊಂದು ಘಟನೆ ಗಮನಕ್ಕೆ ಬಂದಿದೆ. ಗಾಜಿಯಾಬಾದ್‌ನಲ್ಲಿ ತಂದೆ ಮತ್ತು ಮಗಳನ್ನು ಹತ್ಯೆ ಮಾಡಲಾಗಿದೆ" ಎಂದು ಪ್ರಿಯಾಂಕಾ ತಮ್ಮ ಟ್ವಿಟರ್​ನಲ್ಲಿ ತೀಕ್ಷ್ಣವಾಗಿ ಯೋಗಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ

ABOUT THE AUTHOR

...view details