ಕರ್ನಾಟಕ

karnataka

ETV Bharat / bharat

ಬ್ರಿಟಿಷ್ ಫ್ಯಾಷನ್ ಕೌನ್ಸಿಲ್​​ ರಾಯಭಾರಿಯಾಗಿ ಪ್ರಿಯಾಂಕಾ ಚೋಪ್ರಾ - ಫ್ಯಾಷನ್-ಮಂಡಳಿಗಳು-ರಾಯಭಾರಿ ಪ್ರಿಯಾಂಕಾ-ಚೋಪ್ರಾ

ಟ್ವಿಟರ್​​ನಲ್ಲಿ ರಾಯಭಾರತ್ವದ ಬಗ್ಗೆ ಬರೆದುಕೊಂಡಿರುವ ಪ್ರಿಯಾಂಕಾ ಚೋಪ್ರಾ, ಮುಂದಿನ ವರ್ಷ ನಾನು ಲಂಡನ್‌ನಲ್ಲಿ ವಾಸಿಸಲಿದ್ದೇನೆ ಮತ್ತು ಕೆಲಸ ಅಲ್ಲೇ ಮಾಡುತ್ತೇನೆ. ಬ್ರಿಟಿಷ್ ಫ್ಯಾಷನ್ ಕೌನ್ಸಿಲ್‌ನ ಧನಾತ್ಮಕ ಬದಲಾವಣೆಯ ರಾಯಭಾರಿಯಾಗಿರುವುದು ನನಗೆ ತುಂಬಾ ಹೆಮ್ಮೆಯಾಗಿದೆ ಎಂದು ಹೇಳಿಕೊಂಡಿದ್ದಾರೆ.

priyanka-chopra
ಪ್ರಿಯಾಂಕಾ ಚೋಪ್ರಾ

By

Published : Nov 17, 2020, 10:22 AM IST

ಲಂಡನ್​​: ಬಾಲಿವುಡ್​​ನಿಂದ ಹಾಲಿವುಡ್​​ಗೂ ತನ್ನ ನಟನೆಯನ್ನು ವಿಸ್ತರಿಸಿಕೊಂಡಿರುವ ಹಾಟ್​​ ಬೆಡಗಿ ಪ್ರಿಯಾಂಕಾ ಚೋಪ್ರಾ ಜೋನಾಸ್,​​ ಬ್ರಿಟಿಷ್ ಫ್ಯಾಷನ್ ಕೌನ್ಸಿಲ್​​ನ ಪಾಸಿಟಿವ್​​ ಚೇಂಜ್​ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಈ ಕುರಿತ ಮಾಹಿತಿಯನ್ನು ಟ್ವಿಟರ್​​ನಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಟ್ವಿಟರ್​​ನಲ್ಲಿ ರಾಯಭಾರಿತ್ವದ ಬಗ್ಗೆ ಬರೆದುಕೊಂಡಿರುವ ಅವರು, ಮುಂದಿನ ವರ್ಷ ನಾನು ಲಂಡನ್‌ನಲ್ಲಿ ವಾಸಿಸಲಿದ್ದೇನೆ ಮತ್ತು ಕೆಲಸ ಅಲ್ಲೇ ಮಾಡುತ್ತೇನೆ. ಬ್ರಿಟಿಷ್ ಫ್ಯಾಷನ್ ಕೌನ್ಸಿಲ್‌ನ ಪಾಸಿಟಿವ್​​ ಚೇಂಜ್ ರಾಯಭಾರಿಯಾಗಿರುವುದು ನನಗೆ ತುಂಬಾ ಹೆಮ್ಮೆಯಾಗಿದೆ ಎಂದು ಹೇಳಿಕೊಂಡಿದ್ದಾರೆ.

"ಫ್ಯಾಷನ್'' ಯಾವಾಗಲೂ ಪಾಪ್ ಸಂಸ್ಕೃತಿಯ ನಾಡಿಮಿಡಿತ ಮತ್ತು ಸಂಸ್ಕೃತಿಗಳನ್ನು ಸಂಪರ್ಕಿಸುವ ಹಾಗೂ ಜನರನ್ನು ಒಟ್ಟುಗೂಡಿಸುವ ಪ್ರಬಲ ಶಕ್ತಿಯಾಗಿದೆ ಎಂದು ನಟಿ ಪ್ರಿಯಾಂಕಾ ಚೋಪ್ರಾ ಜೋನಸ್​​ ತಮ್ಮ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ಮಾಜಿ ಮಿಸ್ ವರ್ಲ್ಡ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಹಾಗೂ ಪರ್ಪಲ್ ಪೆಬಲ್ ಪಿಕ್ಚರ್ಸ್ ಎಂಬ ಪ್ರೊಡಕ್ಷನ್ ಹೌಸ್ ಅನ್ನು ಹೊಂದಿದ್ದಾರೆ. 2010 ಮತ್ತು 2016ರಲ್ಲಿ ಕ್ರಮವಾಗಿ ಮಕ್ಕಳ ಹಕ್ಕುಗಳ ರಾಷ್ಟ್ರೀಯ ಮತ್ತು ಜಾಗತಿಕ ಯುನಿಸೆಫ್ (UNICEF) ಗುಡ್ವಿಲ್ ರಾಯಭಾರಿಯಾಗಿದ್ದರು.

ABOUT THE AUTHOR

...view details