ನವದೆಹಲಿ : ಭಾರತೀಯ ಜನ ಸಂಘದ ಸ್ಥಾಪಕ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಜನ್ಮ ಜಯಂತಿ ನಿಮಿತ್ತ ಗೌರವ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ, ಮುಖರ್ಜಿ ಅವರ ಆಲೋಚನೆಗಳು ದೇಶಾದ್ಯಂತ ಲಕ್ಷಾಂತರ ಜನರಿಗೆ ಶಕ್ತಿ ನೀಡುತ್ತವೆ ಎಂದು ಹೇಳಿದರು.
"ಜನ್ಮ ಜಯಂತಿಯ ಪ್ರಯುಕ್ತ ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ ಅವರಿಗೆ ನಮಸ್ಕರಿಸುತ್ತೇನೆ. ಧರ್ಮನಿಷ್ಠೆ, ದೇಶಭಕ್ತರಾಗಿದ್ದ ಅವರು, ಭಾರತದ ಅಭಿವೃದ್ಧಿಗೆ ಅನುಕರಣೀಯ ಕೊಡುಗೆಗಳನ್ನು ನೀಡಿದ್ದಾರೆ. ಭಾರತದ ಐಕ್ಯತೆ ಮತ್ತಷ್ಟು ಹೆಚ್ಚಿಸಲು ಅವರು ಧೈರ್ಯಶಾಲಿ ಪ್ರಯತ್ನಗಳನ್ನು ಮಾಡಿದ್ದಾರೆ. ಅವರ ಆಲೋಚನೆಗಳು ಮತ್ತು ಆದರ್ಶಗಳು ರಾಷ್ಟ್ರದಾದ್ಯಂತ ಲಕ್ಷಾಂತರ ಜನರಿಗೆ ಬಲ ನೀಡುತ್ತವೆ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ .
ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಕೂಡ ಮುಖರ್ಜಿ ಅವರಿಗೆ ಗೌರವ ಸಲ್ಲಿಸಿದ್ದು, ಮುಖರ್ಜಿ ಅವರು ಭಾರತದ ಐಕ್ಯತೆ ಮತ್ತು ಸಮಗ್ರತೆಗಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಶ್ಯಾಮಾ ಪ್ರಸಾದ್ ಮುಖರ್ಜಿ ಅವರನ್ನ ನೆನಪಿಸಿಕೊಂಡಿದ್ದು, ಮಾತೃಭೂಮಿಯ ಮೇಲಿನ ಅವರ ಪ್ರೀತಿ ಯಾವಾಗಲೂ ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿಯಾಗಿ ಉಳಿಯುತ್ತದೆ. ಅವರು ರಾಷ್ಟ್ರೀಯತೆಯನ್ನು ಕಾಪಾಡಲು ಪಟ್ಟುಬಿಡದೇ ಹೋರಾಡಿದ ಮಹಾನ್ ದೇಶಭಕ್ತರಾಗಿದ್ದರು ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ಭಾರತಕ್ಕೆ ಒಟ್ಟುಗೂಡಿಸಿದರು. ಮುಖರ್ಜಿ ಒಬ್ಬ ನುರಿತ ನ್ಯಾಯವಾದಿ, ದಾರ್ಶನಿಕ ಮತ್ತು ದೊಡ್ಡ ಶಿಕ್ಷಣ ತಜ್ಞ. ಮುಖರ್ಜಿ ಕಲ್ಕತ್ತಾ ವಿಶ್ವ ವಿದ್ಯಾನಿಲಯದ ಅತ್ಯಂತ ಕಿರಿಯ ಉಪಕುಲಪತಿಯಾಗಿದ್ದರು ಮತ್ತು ಸ್ವತಂತ್ರ ಭಾರತದ ಮೊದಲ ಕೈಗಾರಿಕೆ ಮತ್ತು ಸರಬರಾಜು ಸಚಿವರಾಗಿ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ 6 ಜುಲೈ 1901 ರಂದು ಕೋಲ್ಕತ್ತಾದಲ್ಲಿ ಜನಿಸಿದರು. ಭಾರತದ ಪ್ರಮುಖ ರಾಜಕಾರಣಿ, ನ್ಯಾಯವಾದಿ ಮತ್ತು ಶಿಕ್ಷಣ ತಜ್ಞರಾಗಿದ್ದ ಮುಖರ್ಜಿ, ಜವಾಹರಲಾಲ್ ನೆಹರೂ ಸಂಪುಟದಲ್ಲಿ ಕೈಗಾರಿಕೆ ಮತ್ತು ಸರಬರಾಜು ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ ಪರಿಚಯ