ಕರ್ನಾಟಕ

karnataka

ETV Bharat / bharat

ಪೋರ್ಚುಗಲ್ ಪ್ರಧಾನಿಯ ಭಾರತ ಪ್ರವಾಸ: ದೆಹಲಿಗೆ ಆಗಮಿಸಿದ ಆಂಟೋನಿಯೊ ಕೋಸ್ಟಾ - ಪೋರ್ಚುಗಲ್ ಪ್ರಧಾನಿಯ ಭಾರತ ಪ್ರವಾಸ

ಎರಡು ದಿನಗಳ ಕಾಲ ಭಾರತ ಪ್ರವಾಸ ಕೈಗೊಳ್ಳಲಿರುವ ಪೋರ್ಚುಗಲ್ ಪ್ರಧಾನಿ ಆಂಟೋನಿಯೊ ಕೋಸ್ಟಾ, ದೆಹಲಿಗೆ ಆಗಮಿಸಿದ್ದು, ಮಹಾತ್ಮ ಗಾಂಧೀಜಿಯ 150ನೇ ಜನ್ಮದಿನ ಸಂಭ್ರಮಾಚರಣೆಯ ಸಂಘಟನಾ ಸಮಿತಿ ಆಯೋಜಿಸಿರುವ ಎರಡನೇ ಸಭೆಯಲ್ಲಿ ಭಾಗವಹಿಸಲಿದ್ದಾರೆ.

Portuguese PM came to India as two-day visit
ಆಂಟೋನಿಯೊ ಕೋಸ್ಟಾ

By

Published : Dec 19, 2019, 6:02 AM IST

ನವದೆಹಲಿ:ಎರಡು ದಿನಗಳ ಕಾಲ ಭಾರತ ಪ್ರವಾಸ ಕೈಗೊಳ್ಳಲಿರುವ ಪೋರ್ಚುಗಲ್ ಪ್ರಧಾನಿ ಆಂಟೋನಿಯೊ ಕೋಸ್ಟಾ, ದೆಹಲಿಗೆ ಆಗಮಿಸಿದ್ದಾರೆ.

ಮಹಾತ್ಮ ಗಾಂಧೀಜಿಯ 150ನೇ ಜನ್ಮದಿನ ಸಂಭ್ರಮಾಚರಣೆಯ ಸಂಘಟನಾ ಸಮಿತಿ ಆಯೋಜಿಸಿರುವ ಎರಡನೇ ಸಭೆಯಲ್ಲಿ ಆಂಟೋನಿಯೊ ಕೋಸ್ಟಾ ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಪೋರ್ಚುಗಲ್ ಪ್ರಧಾನಿ ಭಾರತಕ್ಕೆ ಆಗಮಿಸಿದ್ದು, ಇಂದು ನಡೆಯುವ ಸಂಘಟನಾ ಸಮಿತಿ ಸಭೆಯ ಅಧ್ಯಕ್ಷತೆಯನ್ನು ರಾಷ್ಟ್ರಪತಿ ರಾಮ್​ ನಾಥ್​ ಕೋವಿಂದ್​ ವಹಿಸಲಿದ್ದಾರೆ.

ಪ್ರಧಾನಿ ಮೋದಿಯೊಂದಿಗೆ ಆಂಟೋನಿಯೊ ಕೋಸ್ಟಾ ಅಧಿಕೃತ ಮಾತುಕತೆ ನಡೆಸಲಿದ್ದು, ಇದು ಮೂರು ವರ್ಷಗಳ ಅವಧಿಯಲ್ಲಿ ಉಭಯ ರಾಷ್ಟ್ರಗಳ ಪ್ರಧಾನ ಮಂತ್ರಿಗಳ ನಡುವಿನ ಮೂರನೇ ಅಧಿಕೃತ ಸಭೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನು 2019ರ ಅಕ್ಟೋಬರ್ 6ರಂದು ಪ್ರಧಾನ ಮಂತ್ರಿಯಾಗಿ ಪುನರಾಯ್ಕೆಯಾದ ಬಳಿಕ ಕೋಸ್ಟಾ ಅವರ ಪ್ರಸ್ತುತ ಭಾರತ ಪ್ರವಾಸವು, ಯುರೋಪಿನ ಹೊರಗಿನ ದೇಶಗಳೊಂದಿಗಿನ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ.

ABOUT THE AUTHOR

...view details