ಗಾಂಧಿನಗರ: ಲೋಕಸಭಾ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದು, ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮೈತ್ರಿ ಕೂಟ ಭಾರೀ ಮುನ್ನಡೆ ಸಾಧಿಸಿದೆ.
ಫಲಿತಾಂಶದಲ್ಲಿ ಮಗನಿಗೆ ಭಾರಿ ಮುನ್ನಡೆ: ಧನ್ಯವಾದ ಅರ್ಪಿಸಿದ ಮೋದಿ ತಾಯಿ - undefined
ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಭಾರಿ ಮುನ್ನಡೆ ದೊರೆತಿದ್ದು, ಪುತ್ರನ ಸಾಧನೆಯಿಂದ ಸಂತಸಗೊಂಡಿರುವ ತಾಯಿ ಹೀರಾ ಬೆನ್ ದೇಶದ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ.
ಧನ್ಯವಾದ ಅರ್ಪಿಸಿದ ಮೋದಿ ತಾಯಿ
ಮೋದಿ ಸಾಧನೆಯಿಂದ ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯುವತ್ತ ದಾಪುಗಾಲು ಹಾಕುತ್ತಿದ್ದು, ಇದರಿಂದ ಮೋದಿ ತಾಯಿ ಹೀರಾಬೆನ್ ಸಂತಸ ವ್ಯಕ್ತಪಡಿಸಿದ್ದಾರೆ.
ಗಾಂಧಿನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಮುಂದೆ ಕಾಣಿಸಿಕೊಂಡ ಹೀರಾಬೆನ್ ಕೈಮುಗಿಯುವ ಮೂಲಕ ದೇಶದ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ.
Last Updated : May 23, 2019, 12:02 PM IST