ನವದೆಹಲಿ: ಅಂಫಾನ್ ಚಂಡಮಾರುತದ ಬಿಭತ್ಸಕ್ಕೆ ತತ್ತರಿಸಿರುವ ಬಂಗಾಳಕ್ಕೆ ನಾಳೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ಹಾನಿಯ ಬಗ್ಗೆ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಾಥ್ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಗಾಳಕ್ಕೆ ಪ್ರಧಾನಿ ಮೋದಿ: 'ಅಂಫಾನ್' ಹಾನಿಯ ವೈಮಾನಿಕ ಸಮೀಕ್ಷೆ - ಮಮತಾ ಬ್ಯಾನರ್ಜಿ
ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡುತ್ತಿದ್ದು, ಅಂಫಾನ್ ಚಂಡಮಾರುತದಿಂದ ಆಗಿರುವ ಹಾನಿಯ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಪ್ರಧಾನಿ ಮೋದಿಗೆ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಾಥ್ ನೀಡಲಿದ್ದಾರೆ.
ಹಾನಿಗೀಡಾದ ಜಿಲ್ಲೆಗಳಾದ ದಕ್ಷಿಣ 24 ಪರಗಣ, ಕೋಲ್ಕತ್ತಾ ಪೂರ್ವ ಮಿಡ್ನಾಪುರ್ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಬಳಿಕ ಪ್ರಧಾನಿ ಮೋದಿ ಮತ್ತು ಸಿಎಂ ಮಮತಾ ಬ್ಯಾನರ್ಜಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿ ಹಾನಿ ಪ್ರದೇಶವನ್ನು ವೀಕ್ಷಿಸಬೇಕೆಂದು ಮಮತಾ ಮನವಿ ಮಾಡಿದ್ದರು. ತೀವ್ರ ನಷ್ಟಕ್ಕೊಳಗಾದ ಪ್ರದೇಶಗಳ ಪುನರ್‌ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಬೇಕೆಂದು ಕೋರಿದ್ದಾರೆ. ಅಂಫಾನ್ ಚಂಡಮಾರುತದಿಂದ ಈವರೆಗೆ 72 ಮಂದಿ ಮೃತಪಟ್ಟಿದ್ದಾರೆ. ತುರ್ತು ಪರಿಹಾರಕ್ಕೆ ಸಿಎಂ ದೀದಿ 1 ಸಾವಿರ ಕೋಟಿ ರೂಪಾಯಿಗಳನ್ನು ಇಂದು ಬಿಡುಗಡೆ ಮಾಡಿದ್ದಾರೆ.