ಕರ್ನಾಟಕ

karnataka

ETV Bharat / bharat

ಕೇದಾರನಾಥ​ನಲ್ಲಿ ಮೋದಿ.... ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ - undefined

ವಾರಣಾಸಿಯಲ್ಲಿ ನಾಳೆ ಲೋಕಸಭಾ ಚುನಾವಣೆಯ ಮತದಾನ ನಡೆಯಲಿದ್ದು, ಇತ್ತ ಪ್ರಧಾನಿ ನರೇಂದ್ರ ಮೋದಿ ಇಂದು ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ್ದು, ವಿಶೇಷ ಪೂಜೆ ಸಲ್ಲಿಸಿದರು.

ಮೋದಿ

By

Published : May 18, 2019, 9:46 AM IST

Updated : May 18, 2019, 10:17 AM IST

ಕೇದಾರನಾಥ್​:ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರಾಖಂಡ್​ನ ಕೇದಾರನಾಥ ದೇವಾಲಯಕ್ಕೆ ತೆರಳಿದ್ದು, ವಿಶೇಷ ಪೂಜೆ ಸಲ್ಲಿಸಿದರು

ವಾರಣಾಸಿ ಸೇರಿದಂತೆ ಲೋಕಸಭಾ ಚುನಾವಣೆಯ 59 ಕ್ಷೇತ್ರಗಳಲ್ಲಿ ನಾಳೆ ಕೊನೆಯ ಹಂತದ ಮತದಾನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮೋದಿ ದೇವಾಲಯ ಭೇಟಿ ಮಹತ್ವ ಪಡೆದುಕೊಂಡಿದೆ. ಇನ್ನು ಮೇ 23ರಂದು ಲೋಕಸಭಾ ಚುನಾವಣೆ ಫಲಿತಾಂಶ ಘೋಷಣೆಯಾಗಲಿದೆ.

ಕೇದಾರನಾಥದಲ್ಲಿ ಪ್ರಧಾನಿ ಮೋದಿ

ಪ್ರಧಾನಿ ಬರುವ ಹಿನ್ನೆಲೆಯಲ್ಲಿ ಕೇದಾರನಾಥ್​ನಲ್ಲಿ ಭಾರೀ ಬಿಗಿ ಭದ್ರತೆ ಒದಗಿಸಲಾಗಿದೆ. ಎಸ್​ಡಿಆರ್​ಎಫ್​ ಅಧಿಕಾರಿಗಳು ಕಣಿವೆ ಪ್ರದೇಶಗಳಲ್ಲಿ ವಿಶೇಷ ಎಚ್ಚರಿಕೆ ವಹಿಸಿದ್ದಾರೆ. ಪ್ರಧಾನಿ ಆಡಳಿತಕ್ಕೆ ಬಂದ ಬಳಿಕ ಹಾಗೂ ಮೊದಲು ಅನೇಕ ಬಾರಿ ಕೇದಾರನಾಥಗೆ ಭೇಟಿ ನೀಡಿದ್ದಾರೆ.

ಕೇದಾರನಾಥನ ದರ್ಶನ ಅವರಿಗೆ ವಿಶೇಷ ಶಕ್ತಿ ನೀಡಿದೆಯಂತೆ. ಹೀಗಾಗಿ ಕೇದಾರನಾಥೇಶ್ವರನ ಮೇಲೆ ಪ್ರಧಾನಿ ಮೋದಿಗೆ ಇನ್ನಿಲ್ಲದ ಭಕ್ತಿ. ಇಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮೋದಿ ಕೆಲ ಹೊತ್ತು ಧ್ಯಾನ ಮಾಡಲಿದ್ದಾರೆ ಎಂದೂ ಹೇಳಲಾಗುತ್ತಿದೆ.

ನಾಳೆ ಅವರು ಬದರಿನಾಥ್​ಗೆ ಭೇಟಿ ನೀಡಿ ಬದರಿನಾಥೇಶ್ವರನ ದರ್ಶನ ಪಡೆದ ಬಳಿಕ ದೆಹಲಿಗೆ ಹಿಂದಿರುಗಲಿದ್ದಾರೆ. ಒಟ್ಟಿನಲ್ಲಿ ಚುನಾವಣಾ ಪ್ರಚಾರ ಅಂತ್ಯದ ಬಳಿಕ ಮೋದಿ ಕೇದಾರನಾಥನ ಮೊರೆ ಹೋಗಿರುವುದು ಭಾರಿ ಕುತೂಹಲಕ್ಕೂ ಕಾರಣವಾಗಿದೆ.

Last Updated : May 18, 2019, 10:17 AM IST

For All Latest Updates

TAGGED:

ABOUT THE AUTHOR

...view details