ನವದೆಹಲಿ:ದೇಶಾದ್ಯಂತ ಹೇರಲಾಗಿರುವ ಮೊದಲ ಹಂತದ ಲಾಕ್‌ಡೌನ್ ಇಂದಿಗೆ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಬೆಳಗ್ಗೆ 10 ಗಂಟೆಗೆ ಮಾತನಾಡಲಿದ್ದಾರೆ.
ಜನರ ನಿರೀಕ್ಷೆಗಳೇನು?
- ಲಾಕ್ ಡೌನ್ ನಿರ್ಬಂಧ ತಿಂಗಳಾಂತ್ಯದವರೆಗೆ ಮುಂದುವರೆಯಬಹುದು.
- ಜೀವ ಮತ್ತು ಜೀವನೋಪಾಯ ಉಳಿಸಿಕೊಳ್ಳುವುದಕ್ಕೆ ಕೇಂದ್ರ ಸರ್ಕಾರ ಪ್ರಯತ್ನ ಮಾಡಲಿದೆ.
- ಕಂಗೆಟ್ಟಿರುವ ಅರ್ಥವ್ಯವಸ್ಥೆಗೆ ಪುನಶ್ಚೇತನ ನೀಡುವ ಕ್ರಮಗಳು ಮೋದಿ ಭಾಷಣದಲ್ಲಿರಬಹುದು.
- ಕೃಷಿ, ಕೈಗಾರಿಕೆ, ಕಾರ್ಮಿಕರಿಗೆ ಲಾಕ್‌ಡೌನ್ ನಿಂದ ವಿಶೇಷ ರಿಯಾಯತಿ ನೀಡಬಹುದು.
- ಅಂತರ್‌ರಾಜ್ಯ ಪ್ರಯಾಣದ ಮೇಲೆ ನಿರ್ಬಂಧ ಸಡಿಲವಾಗಬಹುದು.
- ಹೆಚ್ಚು ಸೋಂಕು ಕಾಣಿಸಿಕೊಂಡ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳ ಜಾರಿ ಸಾಧ್ಯತೆ.
ಕಳೆದೆರಡು ದಿನಗಳ ಹಿಂದೆ ಎಲ್ಲ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ್ದ ಮೋದಿ ವಿವಿಧ ರಾಜ್ಯಗಳಲ್ಲಿನ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಇದರ ನಡುವೆ ಒಡಿಶಾ, ಪಂಜಾಬ್, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಪಶ್ಚಿಮ ಬಂಗಾಳ ರಾಜ್ಯಗಳು ಈಗಾಗಲೇ ಲಾಕ್‌ಡೌನ್ ವಿಸ್ತರಿಸಿವೆ.