ಮಥುರಾ:ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ ಕಾರ್ಯಕ್ರಮ (ಎನ್‌ಎಡಿಸಿಪಿ) ಉದ್ಘಾಟನೆಗೆ ಪ್ರಧಾನಿ ಮೋದಿ ಮಥುರಾಗೆ ಆಗಮಿಸಿದ್ದಾರೆ.
ಮಥುರಾದಲ್ಲಿ ಪ್ರಧಾನಿ.. ಪ್ಲಾಸ್ಟಿಕ್ ಆಯುವ ಮಹಿಳೆಯರ ಭೇಟಿ ಮಾಡಿದ ಮೋದಿ
ಕಸದಿಂದ ಪ್ಲಾಸ್ಟಿಕ್ ತೆಗೆದುಕೊಳ್ಳುವ ಮಹಿಳೆಯರನ್ನು ನರೇಂದ್ರ ಮೋದಿ ಭೇಟಿಯಾಗಿ, ಸಹಾಯ ಮಾಡಿದರು. ಏಕ-ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳ ವಿರುದ್ಧ ಪಿಎಂ ಇಂದಿನಿಂದ ಅಭಿಯಾನ ಪ್ರಾರಂಭಿಸಿದರು.
ಜಾನುವಾರುಗಳಲ್ಲಿನ ಕಾಲು ಮತ್ತು ಬಾಯಿ ರೋಗ (ಎಫ್‌ಎಂಡಿ) ಮತ್ತು ಬ್ರೂಸೆಲೋಸಿಸ್ ಎಂಬ ರೋಗ ನಿರ್ಮೂಲನೆ ಮಾಡುವ ಗುರಿ ಹೊಂದಿರುವ ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಪ್ರಾರಂಭಿಸಿದರು. ಈ ವೇಳೆ, ಕಸದಿಂದ ಪ್ಲಾಸ್ಟಿಕ್ ತೆಗೆದುಕೊಳ್ಳುವ ಮಹಿಳೆಯರನ್ನು ನರೇಂದ್ರ ಮೋದಿ ಭೇಟಿಯಾಗಿ, ಸಹಾಯ ಮಾಡಿದರು. ಏಕ-ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳ ವಿರುದ್ಧ ಪಿಎಂ ಇಂದು ಅಭಿಯಾನ ಪ್ರಾರಂಭಿಸಿದರು.
ಅಲ್ಲದೆ ಮೋದಿ, ರಾಷ್ಟ್ರೀಯ ಕೃತಕ ಗರ್ಭಧಾರಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಮಥುರಾ ಸಂಸದೆ ಹೇಮಾ ಮಾಲಿನಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದಕ್ಕೂ ಮೊದಲು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಪ್ರಧಾನಿ ನರೇಂದ್ರ ಮೋದಿ ಅವರನ್ನ ಬರಮಾಡಿಕೊಂಡರು.