ನವದೆಹಲಿ:ಇಂದು 70ನೇ ಸಂವಿಧಾನ ದಿನದ ಹಿನ್ನೆಲೆಯಲ್ಲಿ ಸಂಸತ್ನಲ್ಲಿ ಇಂದು ವಿಶೇಷ ಜಂಟಿ ಅಧಿವೇಶನ ನಡೆಯಿತು. ಈ ಅಧಿವೇಶನ ಉದ್ದೇಶಿಸಿ ಪ್ರಧಾನಿ ಮಾತನಾಡಿದರು. ಸಂವಿಧಾನದ ಮಹತ್ವವನ್ನು ಸಾರಿದರು.
ಸಂವಿಧಾನವು ಪ್ರಜೆಗಳ ಹಕ್ಕು - ಕರ್ತವ್ಯಗಳನ್ನು ಎತ್ತಿ ಹಿಡಿಯುತ್ತೆ: ಜಂಟಿ ಅಧಿವೇಶನದಲ್ಲಿ ಪಿಎಂ ಮಾತು - 70ನೇ ಸಂವಿಧಾನ ದಿನಾಚರಣೆ
70ನೇ ಸಂವಿಧಾನ ದಿನಾಚರಣೆಯ ಹಿನ್ನೆಲೆ ಲೋಕಸಭೆಯಲ್ಲಿ ಜಂಟಿ ಅಧಿವೇಶನ ನಡೆಯುತ್ತಿದ್ದು, ಸಭೆಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಸಂವಿಧಾನದ ಪ್ರಾಮುಖ್ಯತೆ ಕುರಿತು ಮಾತನಾಡಿದರು.
![ಸಂವಿಧಾನವು ಪ್ರಜೆಗಳ ಹಕ್ಕು - ಕರ್ತವ್ಯಗಳನ್ನು ಎತ್ತಿ ಹಿಡಿಯುತ್ತೆ: ಜಂಟಿ ಅಧಿವೇಶನದಲ್ಲಿ ಪಿಎಂ ಮಾತು constitutional day](https://etvbharatimages.akamaized.net/etvbharat/prod-images/768-512-5179291-thumbnail-3x2-megha.jpg)
ಪಿಎಂ ಮೋದಿ
ಲೋಕಸಭೆಯಲ್ಲಿ ಜಂಟಿ ಅಧಿವೇಶನದಲ್ಲಿ ಮೋದಿ ಭಾಷಣ
ಭಾರತದ ಸಂವಿಧಾನವು ಪ್ರಜೆಗಳ ಹಕ್ಕು ಮತ್ತು ಕರ್ತವ್ಯಗಳನ್ನು ಎತ್ತಿ ಹಿಡಿಯುತ್ತದೆ ಎಂದು ಸಭೆಯನ್ನುದ್ದೇಶಿಸಿ ಭಾಷಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಪ್ರಜೆಗಳ ಹಕ್ಕು ಮತ್ತು ಕರ್ತವ್ಯ ನಮ್ಮ ಸಂವಿಧಾನದ ವಿಶೇಷ ಅಂಶವಾಗಿದೆ. ಸಂವಿಧಾನದಲ್ಲಿ ಉಲ್ಲೇಖಿಸಲಾದ ಕರ್ತವ್ಯಗಳನ್ನು ನಾವು ಹೇಗೆ ಪೂರೈಸಬಹುದು ಎಂಬುದರ ಕುರಿತು ಯೋಚಿಸಬೇಕಿದೆ ಎಂದು ಪಿಎಂ ಮೋದಿ ತಿಳಿಸಿದರು.
Last Updated : Nov 26, 2019, 2:05 PM IST