ತಿರುಪತಿ: 2ನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಪ್ರಧಾನಿ ಮೋದಿ ಇದೇ ಮೊದಲ ಬಾರಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದರು.
ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಪ್ರಧಾನಿ ಮೋದಿ, ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿ ಜಗನ್ ಮೋಹನ್ರೆಡ್ಡಿ ಜೊತೆ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಭೇಟಿ ನೀಡಿದ ಮೋದಿ, ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದುಕೊಂಡಿದ್ದಾರೆ.
ಇದಕ್ಕೂ ಮೊದಲು ತಿರುಪತಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಕಳೆದ ಕೆಲವು ವರ್ಷಗಳಿಂದ ತಿರುಪತಿಗೆ ಬರಲು ನಾನು ಅದೃಷ್ಟ ಮಾಡಿದ್ದೇನೆ. ಹೊಸ ಸರ್ಕಾರ ರಚನೆ ಮಾಡಿದ ಬಳಿಕ ವೆಂಕಟೇಶ್ವರನ ಆಶೀರ್ವಾದ ತೆಗೆದುಕೊಳ್ಳಲು ಬಂದಿದ್ದೇನೆ. 130 ಕೋಟಿ ಭಾರತೀಯರ ಕನಸುಗಳನ್ನು ಪೂರೈಸಲು ಆಶೀರ್ವದಿಸಬೇಕೆಂದು ತಿಮ್ಮಪ್ಪನಲ್ಲಿ ಕೇಳಿಕೊಳ್ಳುತ್ತೇನೆ ಎಂದರು.
ಅಲ್ಲದೇ ಆಂಧ್ರದ ನೂತನ ಮುಖ್ಯಮಂತ್ರಿ ಜಗನ್ ಅವರನ್ನ ಅಭಿನಂದಿಸಿದ ಮೋದಿ, ಆಂಧ್ರಪ್ರದೇಶದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿರುತ್ತದೆ ಎಂದು ಭರವಸೆ ನೀಡಿದರು.