ನವದೆಹಲಿ:ಹೊಸ ವರ್ಷಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಟ್ವೀಟ್ ಮೂಲಕ ಶುಭಾಶಯ ತಿಳಿಸಿದ್ದಾರೆ.
ದೇಶದ ಜನತೆಗೆ ಟ್ವೀಟ್ ಮಾಡಿರುವ ಅವರು "ಎಲ್ಲರಿಗೂ 2021 ರ ಶುಭಾಶಯಗಳು! ಈ ವರ್ಷ ಉತ್ತಮ ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯನ್ನು ತರಲಿ. ಭರವಸೆ ಮತ್ತು ಸ್ವಾಸ್ಥ್ಯದ ಮನೋಭಾವ ಮೇಲುಗೈ ಸಾಧಿಸಲಿ" ಎಂದು ಶುಭ ಹಾರೈಸಿದ್ದಾರೆ.
ಇನ್ನೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದು, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು! ಹೊಸ ವರ್ಷವು ಹೊಸ ಆರಂಭವನ್ನು ಮಾಡಲು ವೈಯಕ್ತಿಕ ಹಾಗೂ ಸಾಮೂಹಿಕ ಅಭಿವೃದ್ಧಿಗೆ ಪರಿಹರಿಸಲು ಅವಕಾಶ ಒದಗಿಸುತ್ತದೆ. COVID-19 ಪರಿಸ್ಥಿತಿಯಿಂದ ಉಂಟಾಗುವ ಸವಾಲುಗಳು ಒಗ್ಗಟ್ಟಿನಿಂದ ಮುಂದುವರಿಸಲು ನಮ್ಮ ಸಂಕಲ್ಪವನ್ನು ಬಲಪಡಿಸುತ್ತವೆ ಎಂದು ಟ್ವೀಟ್ ಮಾಡಿದ್ದಾರೆ.
ಓದಿ : ‘ನಮಸ್ಕಾರ ನಿನಗೆ ಭಾಸ್ಕರ’... ಕಣ್ಮನ ತಣಿಸುವ ವರ್ಷದ ಮೊದಲ ಸೂರ್ಯೋದಯದ ದೃಶ್ಯ! ವಿಡಿಯೋ...