ನವದೆಹಲಿ : ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
"ಅವರ ವೃತ್ತಿಜೀವನದುದ್ದಕ್ಕೂ ಅವರು ಫುಟ್ಬಾಲ್ ಮೈದಾನದಲ್ಲಿ ಹಲವು ಅತ್ಯುತ್ತಮ ಕ್ರೀಡಾ ಕ್ಷಣಗಳನ್ನು ನಮಗೆ ನೀಡಿದ್ದಾರೆ. ಅವರ ಅಕಾಲಿಕ ನಿಧನವು ನಮ್ಮೆಲ್ಲರಲ್ಲೂ ದುಃಖವನ್ನುಂಟು ಮಾಡಿದೆ" ಎಂದು ಮೋದಿ ಸಂತಾಪ ಸೂಚಿಸಿದ್ದಾರೆ.
ಫುಟ್ಬಾಲ್ ದಂತಕಥೆ ಹಾಗೂ ಅರ್ಜೆಂಟೀನಾದ ಮಾಜಿ ಫುಟ್ಬಾಲ್ ಆಟಗಾರ ಡಿಯಾಗೋ ಅರ್ಮಾಂಡೋ ಮರಡೋನಾ ತಮ್ಮ 60ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಕೆಲವು ದಿನಗಳ ಹಿಂದೆ ಅವರ ಮೆದುಳಿನದಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆಸ್ಪತ್ರೆಯಿಂದ ಗುಣಮುಖರಾಗಿ ಹೊರ ಬಂದ ಎರಡು ವಾರಗಳ ನಂತರ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಓದಿ:'ಆಕಾಶದಲ್ಲಿ ಒಟ್ಟಿಗೆ ಸಾಕರ್ ಆಡುತ್ತೇವೆ' :ಮರಡೋನಾ ಸಾವಿಗೆ ಪೀಲೆ ಹೃದಯಸ್ಪರ್ಶಿ ಸಂತಾಪ
1986ರಲ್ಲಿ ಅರ್ಜೆಂಟೀನಾಗೆ ಫುಟ್ಬಾಲ್ ವಿಶ್ವಕಪ್ ಗೆದ್ದುಕೊಡುವಲ್ಲಿ ಪ್ರಮುಖ ವಹಿಸಿದ ಮರಡೋನಾ ಅವರು ತಮ್ಮ ಕೌಶಲ್ಯದಿಂದಾಗಿ ಹ್ಯಾಂಡ್ಸ್ ಆಫ್ ಗಾಡ್ ಎಂದೇ ಖ್ಯಾತಿ ಪಡೆದಿದ್ದರು.