ಕರ್ನಾಟಕ

karnataka

ETV Bharat / bharat

ಮದ್ರಾಸ್​ ಐಐಟಿ ಘಟಿಕೋತ್ಸವದಲ್ಲಿ ಪ್ರಧಾನಿ ಮೋದಿ ಭಾಗಿ - ಸಿಂಗಾಪುರ-ಇಂಡಿಯಾ ಹ್ಯಾಕಥಾನ್‌

ಚೆನ್ನೈನಲ್ಲಿ ನಡೆಯುತ್ತಿರುವ ಸಿಂಗಾಪುರ-ಇಂಡಿಯಾ ಹ್ಯಾಕಥಾನ್‌ ಬಹುಮಾನ ವಿತರಣಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದಾರೆ.

ಪ್ರಧಾನಿ ಮೋದಿ

By

Published : Sep 30, 2019, 10:46 AM IST

ಚೆನ್ನೈ:ಅಮೆರಿಕ ಪ್ರವಾಸ ಮುಗಿಸಿ ಭಾರತಕ್ಕೆ ವಾಪಸ್ ಆಗಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಚೆನ್ನೈಗೆ ಆಗಮಿಸಿದ್ದು ಮದ್ರಾಸ್​ ಐಐಟಿ 56ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದಾರೆ.

ಚೆನ್ನೈನಲ್ಲಿ ಮಾತನಾಡಿದ ಮೋದಿ ಲೋಕಸಭಾ ಚುನಾವಣೆ ನಂತರ ಮೊದಲಬಾರಿಗೆ ತಮಿಳುನಾಡಿಗೆ ಆಗಮಿಸುತ್ತಿರುವುದು ಸಂತೋಷ ತಂದಿದೆ ಎಂದಿದ್ದಾರೆ.

ಅಮೆರಿಕ ಪ್ರವಾಸದಲ್ಲಿದ್ದಾಗ ನಾನು ತಮಿಳು ಭಾಷೆಯಲ್ಲಿ ಕೆಲವು ವಿಷಯ ಹೇಳಿದ್ದು, ಪ್ರಪಂಚದ ಹಳೆಯ ಭಾಷೆಗಳಲ್ಲಿ ತಮಿಳು ಕೂಡ ಒಂದು ಎಂದಿದ್ದೆ. ಆಗಿನಿಂದ ಅಮೆರಿಕದಲ್ಲೂ ತಮಿಳು ಭಾಷೆಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದಿದ್ದಾರೆ.

ಸಿಂಗಾಪುರ-ಇಂಡಿಯಾ ಹ್ಯಾಕಥಾನ್‌ನ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಭಾಗವಹಿಸಿದ್ದು, ಐಐಟಿ-ಮದ್ರಾಸ್ ರಿಸರ್ಚ್ ಪಾರ್ಕ್ ಸ್ಟಾರ್ಟ್ ಅಪ್‌ಗಳ ವಸ್ತುಪ್ರದರ್ಶನವನ್ನು ವೀಕ್ಷಿಸಲಿದ್ದಾರೆ. 24 ಗಂಟೆಗಳ ಕೋಡಿಂಗ್​ ಚಾಲೆಂಜ್​ ಆದ ಹ್ಯಾಕಥಾನ್​ ನಿನ್ನೆ ಆರಂಭವಾಗಿ ಮುಗಿದಿದೆ. ಹೆಚ್​ ಟಿಎಂಎಲ್​ ಕೋಡ್​ಗಳನ್ನು ಜೋಡಿಸುವ ಸ್ಪರ್ಧೆ ಇದಾಗಿತ್ತು.

ABOUT THE AUTHOR

...view details