ಅಹಮದಾಬಾದ್: ನಾಳೆ 69ನೇ ವಸಂತಕ್ಕೆ ಕಾಲಿಡಲಿರುವ ಪ್ರಧಾನಿ ಮೋದಿ ತಮ್ಮ ಜನ್ಮದಿನದ ಅಂಗವಾಗಿ ಗುಜಾರಾತ್ಗೆ ಭೇಟಿ ನೀಡಿದ್ದಾರೆ.
ಹುಟ್ಟುಹಬ್ಬದ ದಿನ ಅಮ್ಮನ ನೋಡಲು ತವರಿಗೆ ಓಡೋಡಿ ಬಂದ ಪಿಎಂ ಮೋದಿ... ಸ್ವಾಗತಿಸಿದ ಜನ ಸಾಗರ - ನರೇಂದ್ರ ಮೋದಿ ಹುಟ್ಟು ಹಬ್ಬ
ಪ್ರಧಾನಿ ಮೋದಿ ನಾಳೆ ತಮ್ಮ ಜನ್ಮದಿನದ ಅಂಗವಾಗಿ ಇಂದು ಗುಜರಾತ್ನ ಅಹಮದಾಬಾದ್ಗೆ ಭೇಟಿ ನೀಡಿದ್ದಾರೆ.
ಜನ್ಮದಿನದ ಅಂಗವಾಗಿ ತಾಯಿ ಹೀರಾಬೆನ್ ಅವರನ್ನ ಭೇಟಿ ಮಾಡಲು ಅಹಮದಾಬಾದ್ಗೆ ಆಗಮಿಸಿದ್ದಾರೆ. ಅಹಮದಾಬ್ಗೆ ಬಂದ ಮೋದಿಯನ್ನ ಹಲವು ಬಿಜೆಪಿ ನಾಯಕರು ಸ್ವಾಗತ ಕೋರಿದ್ದಾರೆ. ಅಲ್ಲದೆ ವಿಮಾನ ನಿಲ್ದಾಣದ ಹೊರಗೆ ಸೇರಿದ್ದ ಜನ ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತ ಕೋರಿದ್ರು. ಈ ವೇಳೆ ಮೋದಿ ಕಾರಿನಲ್ಲಿ ಕುಳಿತುಕೊಂಡೆ ಜನರತ್ತ ಕೈ ಬೀಸಿ ಸಂತಸ ವ್ಯಕ್ತಪಡಿಸಿದ್ದಾರೆ.
ಮೋದಿ ನಾಳೆ ನರ್ಮದಾ ಜಿಲ್ಲೆಯ ಕೆವಾಡಿಯಾಗೆ ಭೇಟಿ ನೀಡಲಿದ್ದಾರೆ. 2017ರಲ್ಲಿ ಉದ್ಘಾಟನೆಗೊಂಡ ನರ್ಮದಾ ಜಲಾಶಯ ತನ್ನ ಗರಿಷ್ಠ ಮಟ್ಟ 138.68 ಮೀಟರ್ ತಲುಪಿದೆ. ಹೀಗಾಗಿ ಜಲಾಶಯಕ್ಕೆ ಭೇಟಿ ನೀಡಲಿರುವ ಮೋದಿ, ನಮಾಮಿ ನರ್ಮದೆ ಮಹೋತ್ಸವಕ್ಕೆ ಚಾಲನೆ ನೀಡಿ, ಸಾರ್ವಜನಿಕ ಸಭೆಯನ್ನ ಉದ್ದೇಶಿಸಿ ಮಾತನಾಡಲಿದ್ದಾರೆ.