ನವದೆಹಲಿ: ಜನತಾ ಕರ್ಫ್ಯೂನಿಂದಾಗಿ ದೇಶ ಸ್ತಬ್ಧವಾಗಿದೆ. ಜನರು ಮನೆಗಳಿಂದ ಹೊರಬರದೇ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ಬೆಂಬಲ ನೀಡುತ್ತಿದ್ದಾರೆ. ಜನತಾ ಕರ್ಫ್ಯೂಗೆ ಆರಿನ್ ಕ್ಯಾಪಿಟಲ್ ಅಧ್ಯಕ್ಷ ಹಾಗೂ ''ಅಕ್ಷಯ ಪಾತ್ರ''ದ ಸಹ ಸಂಸ್ಥಾಪಕ ಟಿ.ವಿ. ಮೋಹನ್ದಾಸ್ ಪೈ ಬೆಂಬಲ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮೋಹನ್ದಾಸ್ ಪೈ ''ನಾವು ಜನತಾ ಕರ್ಫ್ಯೂ ಆದ ಇಂದು ಮನೆಯಲ್ಲಿಯೇ ಇದ್ದೇವೆ. ಈ ಸಮಯದಲ್ಲಿ ಕೆಲ ವಸ್ತುಗಳನ್ನು ಖರೀದಿ ಮಾಡಬೇಕೆಂದರೆ ದಯವಿಟ್ಟು ಡಿಜಿಟಲ್ ಪೇಮೆಂಟ್ ಅನ್ನು ಬಳಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಸುರಕ್ಷಿತವಾಗಿರಿ'' ಎಂದು ಮನವಿ ಮಾಡಿದ್ದಾರೆ.
ಜನತಾ ಕರ್ಫ್ಯೂನಂದು ಡಿಜಿಟಲ್ ಪೇಮೆಂಟ್ ಮಾಡಿ ಸುರಕ್ಷಿತವಾಗಿರಿ: ಪ್ರಧಾನಿ - akshaya patra
ಜನತಾ ಕರ್ಫ್ಯೂನಿಂದಾಗಿ ದೇಶದ ಬಹುಪಾಲು ನಗರಗಳು ಮೌನವಾಗಿವೆ. ಈ ವೇಳೆ ಡಿಜಿಟಲ್ ಪೇಮೆಂಟ್ಗಳನ್ನು ಉಪಯೋಗಿಸಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಪ್ರಧಾನಿ ಮೋದಿ ಟ್ವೀಟ್ನಲ್ಲಿ ಮನವಿ ಮಾಡಿದ್ದಾರೆ.
ಡಿಜಿಟಲ್ ಪೇಮೆಂಟ್ಸ್
ಮೋಹನ್ ದಾಸ್ ಪೈ ಅವರ ಟ್ವೀಟ್ಗೆ ರಿಟ್ವೀಟಿಸಿರುವ ಪ್ರಧಾನಿ ಮೋದಿ ಡಿಜಿಟಲ್ ಪೇಮೆಂಟ್ಗಳನ್ನು ಅಳವಡಿಸಿಕೊಳ್ಳುವಂತೆ ಮತ್ತೆ ಮನವಿ ಮಾಡಿದ್ದಾರೆ. ಜೊತೆಗೆ ಇಂದು ಡಿಜಿಟಲ್ ಪೇಮೆಂಟ್ ಬಗ್ಗೆ ಟ್ವೀಟ್ ಮಾಡಿರುವ ಕೆಲವರ ಟ್ವಿಟ್ಗಳನ್ನು ಉಲ್ಲೇಖಿಸಿದ್ದಾರೆ.