ಕರ್ನಾಟಕ

karnataka

ETV Bharat / bharat

ಕೇಜ್ರಿವಾಲ್‌ರನ್ನ ನೂತನ ಸಿಎಂ ಆಗಿ ನೇಮಿಸಿದ ಕೋವಿಂದ್: ಸಿಎಂ ಜೊತೆ 6 ಸಚಿವರ ಪ್ರಮಾಣ - ನವದೆಹಲಿ ವಿಧಾನಸಭೆ ಚುನಾವಣೆ

ಆಮ್​ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ದೆಹಲಿಯ ಹೊಸ ಮುಖ್ಯಮಂತ್ರಿಯಾಗಿ ನೇಮಕ ಮಾಡಿದ್ದಾರೆ.

Prez appoints Kejriwal as next Delhi CM,ಸಿಎಂ ಜೊತೆ 6 ಸಚಿವರಿಂದ ಪ್ರಮಾಣ
ಸಿಎಂ ಜೊತೆ 6 ಸಚಿವರಿಂದ ಪ್ರಮಾಣ

By

Published : Feb 14, 2020, 11:28 PM IST

ನವದೆಹಲಿ: ವಿಧಾನಸಭಾ ಚುನಾವಣೆಯಲ್ಲಿ ಆಮ್​ ಆದ್ಮಿ ಪಕ್ಷ 62 ಸ್ಥಾನಗಳನ್ನ ಗೆದ್ದಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅರವಿಂದ್ ಕೇಜ್ರಿವಾಲ್​ರನ್ನು ದೆಹಲಿಯ ಹೊಸ ಮುಖ್ಯಮಂತ್ರಿಯಾಗಿ ನೇಮಕ ಮಾಡಿದ್ದಾರೆ.

ಅಧಿಕೃತ ಅಧಿಸೂಚನೆಯ ಪ್ರಕಾರ, ಮುಖ್ಯಮಂತ್ರಿಯವರ ಸಲಹೆಯ ಮೇರೆಗೆ ರಾಷ್ಟ್ರಪತಿಯವರು ಆರು ಶಾಸಕರನ್ನು ದೆಹಲಿ ಸರ್ಕಾರದ ಮಂತ್ರಿಗಳಾಗಿ ನೇಮಕ ಮಾಡಿದ್ದಾರೆ. ಮನೀಶ್ ಸಿಸೋಡಿಯಾ, ಸತ್ಯೇಂದರ್ ಜೈನ್, ಗೋಪಾಲ್ ರೈ, ಕೈಲಾಶ್ ಗೆಹ್ಲೋಟ್, ಇಮ್ರಾನ್ ಹುಸೇನ್ ಮತ್ತು ರಾಜೇಂದ್ರ ಗೌತಮ್ ಭಾನುವಾರ ಸಿಎಂ ಕೇಜ್ರಿವಾಲ್ ಜೊತೆಯಲ್ಲಿ ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಮಂತ್ರಿಮಂಡಲದ ರಾಜಿನಾಮೆಯನ್ನ ತಕ್ಷವೇ ಜಾರಿಗೆ ಬರುವಂತೆ ರಾಷ್ಟ್ರಪತಿಗಳು ಒಪ್ಪಿಕೊಂಡಿದ್ದಾರೆ ಎಂದು ಪ್ರತ್ಯೇಕ ಅಧಿಸೂಚನೆ ತಿಳಿಸಿದೆ. ನೂತನ ಮುಖ್ಯಮಂತ್ರಿಗಳು ಪ್ರಮಾಣವಚನ ಸ್ವೀಕರಿಸುವವರೆಗೆ ತಮ್ಮ ಸ್ಥಾನದಲ್ಲಿ ಮುಂದುವರಿಯುವಂತೆ ತಿಳಿಸಲಾಗಿದೆ.

2020ರ ನವದೆಹಲಿ ವಿಧಾಸಭೆ ಚುನಾವಣೆಯ ಫಲಿತಾಂಶ ಮಂಗಳವಾರ ಹೊರಬಂದಿದ್ದು, 70ರಲ್ಲಿ ಆಮ್​ ಆದ್ಮಿ ಪಕ್ಷ 62 ಸ್ಥಾನ ಗೆದ್ದಿದ್ರೆ, ಬಿಜೆಪಿ 8 ಸ್ಥಾನ ಗಳಿಸಿದೆ. ಕಾಂಗ್ರೆಸ್ ಸತತ ಎರಡನೇ ಬಾರಿಗೆ ಶೂನ್ಯ ಸಂಪಾದನೆಮಾಡಿದೆ.

ಭಾನುವಾರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ABOUT THE AUTHOR

...view details