ತಿರುಪತಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತಿರುಪತಿಗೆ ಭೇಟಿ ನೀಡಿದ್ದು, ಶ್ರೀ ವೆಂಕಟೇಶ್ವರನ ದರ್ಶನ ಪಡೆದರು.
ತಿರುಪತಿಗೆ ರಾಷ್ಟ್ರಪತಿ ಭೇಟಿ: ಲಾರ್ಡ್ ವೆಂಕಟೇಶ್ವರನ ದರ್ಶನ ಪಡೆದ ಕೋವಿಂದ್ - President Ramnath kovind
ರಾಷ್ಟ್ರಪತಿ ರಾಮನಾಥ್ ಕೋವಿಂದ್ ರೆನಿಗುಂಟಾ ವಿಮಾನ ನಿಲ್ದಾಣಕ್ಕೆ ತಲುಪಿದ ಸಂದರ್ಭ ಅವರನ್ನು ರಾಜ್ಯಪಾಲ ಬಿಸ್ವಾಭೂಷಣ್ ಮತ್ತು ಸಿಎಂ ಜಗನ್ಮೋಹನ್ ರೆಡ್ಡಿ ಸ್ವಾಗತಿಸಿದರು. ಬಳಿಕ ಅವರು ವೆಂಕಟೇಶ್ವರನ ದರ್ಶನ ಪಡೆದರು.
![ತಿರುಪತಿಗೆ ರಾಷ್ಟ್ರಪತಿ ಭೇಟಿ: ಲಾರ್ಡ್ ವೆಂಕಟೇಶ್ವರನ ದರ್ಶನ ಪಡೆದ ಕೋವಿಂದ್ President visits Tirumala!!](https://etvbharatimages.akamaized.net/etvbharat/prod-images/768-512-9646157-thumbnail-3x2-tirumala.jpg)
ತಿರುಪತಿಗೆ ರಾಷ್ಟ್ರಪತಿ ಭೇಟಿ; ಲಾರ್ಡ್ ವೆಂಕಟೇಶ್ವರನ ದರ್ಶನ ಪಡೆದ ಕೋವಿಂದ್
ತಿರುಪತಿಗೆ ರಾಷ್ಟ್ರಪತಿ ಭೇಟಿ
ರಾಮನಾಥ್ ಕೋವಿಂದ್ ರೆನಿಗುಂಟಾ ವಿಮಾನ ನಿಲ್ದಾಣಕ್ಕೆ ತಲುಪಿದ ಸಂದರ್ಭ ಅವರನ್ನು ರಾಜ್ಯಪಾಲ ಬಿಸ್ವಾಭೂಷಣ್ ಮತ್ತು ಸಿಎಂ ಜಗನ್ಮೋಹನ್ ರೆಡ್ಡಿ ಸ್ವಾಗತಿಸಿದರು. ಮಧ್ಯಾಹ್ನ 12.15ಕ್ಕೆ ತಿರುಮಲ ಪದ್ಮಾವತಿ ಅತಿಥಿ ಗೃಹಕ್ಕೆ ತಲುಪಿದ್ದು, 1.05ಕ್ಕೆ ವರಹಸ್ವಾಮಿಯ ದರ್ಶನ ಮಾಡಿದರು. ನಂತರ ಲಾರ್ಡ್ ವೆಂಕಟೇಶ್ವರನ ದರ್ಶನ ಪಡೆದರು.
ಅರ್ಚಕರು ಕೋವಿಂದ್ ಅವರನ್ನು ದೇವಸ್ಥಾನಕ್ಕೆ ಸ್ವಾಗತಿಸಿ, ಬಳಿಕ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಂಜೆ 4.50ಕ್ಕೆ ರೆನಿಗುಂಟಾ ವಿಮಾನ ನಿಲ್ದಾಣಕ್ಕೆ ತೆರಳಿ ಚೆನ್ನೈಗೆ ತೆರಳಲಿದ್ದಾರೆ.