ನವದೆಹಲಿ:2012ರ ನಿರ್ಭಯಾ ಹತ್ಯಾಚಾರ ಪ್ರಕರಣದ ಆರೋಪಿಗಳ ಗಲ್ಲು ಶಿಕ್ಷೆ ಮೇಲಿಂದ ಮೇಲೆ ಮುಂದೂಡಿಕೆಯಾಗುತ್ತಿದ್ದು, ಇದರ ಮಧ್ಯೆ ಕ್ಷಮದಾನ ನೀಡುವಂತೆ ರಾಷ್ಟ್ರಪತಿಗಳ ಬಳಿ ಮನವಿ ಸಲ್ಲಿಕೆ ಮಾಡಿದ್ದ ಆರೋಪಿ ಪವನ್ ಗುಪ್ತಾ ಅರ್ಜಿ ಇದೀಗ ವಜಾಗೊಂಡಿದೆ.
ನಿರ್ಭಯಾ ರೇಪ್ & ಮರ್ಡರ್ ಕೇಸ್... ಆರೋಪಿ ಪವನ್ ಗುಪ್ತಾ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿ ವಜಾ
ಈ ಎಲ್ಲ ಆರೋಪಿಗಳಿಗೆ ಈಗಾಗಲೇ ಸುಪ್ರೀಂಕೋರ್ಟ್ ಮರಣದಂಡನೆ ವಿಧಿಸಿದೆ. ಆದರೆ, ಮೇಲಿಂದ ಮೇಲೆ ಅರ್ಜಿ ಸಲ್ಲಿಕೆ ಮಾಡುತ್ತಿರುವ ಕಾರಣ ದಿನಾಂಕ ಮುಂದೂಡಿಕೆಯಾಗುತ್ತಿದೆ. ಈ ಹಿಂದೆ ತನಗೆ ವಿಧಿಸಿರುವ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಬೇಕು ಎಂದು ಕೋರಿ ಸುಪ್ರೀಂಕೋರ್ಟ್ಗೆ ಕ್ಯುರೇಟಿವ್ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಬಗೆಗಿನ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಅರ್ಜಿ ತಿರಸ್ಕರಿಸಿತ್ತು. ಆ ಬಳಿಕ ಗುಪ್ತಾ ಕ್ಷಮಾದಾನ ಮಾಡುವಂತೆ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಕೆ ಮಾಡಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ರಾಷ್ಟ್ರಪತಿಗಳು ಗುಪ್ತಾ ಕೋರಿಕೆಯನ್ನ ವಜಾಗೊಳಿಸಿದ್ದಾರೆ. 2012ರಲ್ಲಿ ಈ ಘಟನೆ ನಡೆದಾಗ ಪವನ್ ಗುಪ್ತಾ ಅಪ್ರಾಪ್ತನಾಗಿದ್ದ ಎಂಬ ಕಾರಣವನ್ನೇ ಇಟ್ಟುಕೊಂಡು ರಾಷ್ಟ್ರಪತಿಗಳ ಮುಂದೆ ಕ್ಷಮಾದಾನ ಅರ್ಜಿಯನ್ನ ಸಲ್ಲಿಕೆ ಮಾಡಲಾಗಿತ್ತು.