ನವದೆಹಲಿ:ಪ್ರವಾದಿ ಮಹಮದ್ ಪೈಗಂಬರ್ ಅವರ ಜನ್ಮದಿನದ ಪ್ರಯುಕ್ತ ಇಂದು ದೇಶಾದ್ಯಂತ ಈದ್ ಮಿಲಾದ್ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ದೇಶದ ಮುಸ್ಲಿಂ ಬಾಂಧವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ಮೋದಿ ಶುಭಾಶಯ ಕೋರಿದ್ದಾರೆ.
ಪೈಗಂಬರ್ ಆದರ್ಶ ಅನುಕರಣೀಯ: ರಾಷ್ಟ್ರಪತಿ, ಪ್ರಧಾನಿಯಿಂದ ಈದ್ ಮುಬಾರಕ್ - birthday of Prophet Muhammad wishes by PM Modi
ಪ್ರವಾದಿ ಮಹಮದ್ ಪೈಗಂಬರ್ ಅವರು ಮನುಕುಲಕ್ಕೆ ವಿಶ್ವ ಭಾತೃತ್ವ ಮಾರ್ಗ ತೋರಿದ ಮಹಾಪುರುಷರು. ಅವರ ಆದರ್ಶ ಬೋಧನೆಗಳು ಮತ್ತು ಉದಾತ್ತ ತತ್ವಾದರ್ಶಗಳನ್ನು ಜನರು ಪಾಲಿಸಬೇಕೆಂದು ಪ್ರಧಾನಿ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಈದ್ ಮಿಲಾದ್ ದಿನದಂದು ಕರೆ ನೀಡಿದ್ದಾರೆ.
ಪ್ರವಾದಿ ಮುಹಮದ್ ಅವರ ಜನ್ಮದಿನವಾದ ಮಿಲಾದ್- ಉನ್- ನಬಿ ಸಂದರ್ಭದಲ್ಲಿ ಎಲ್ಲ ನಾಗರಿಕರಿಗೆ, ವಿಶೇಷವಾಗಿ ಭಾರತ ಮತ್ತು ವಿದೇಶದಲ್ಲಿರುವ ನಮ್ಮ ಮುಸ್ಲಿಂ ಸಹೋದರ-ಸಹೋದರಿಯರಿಗೆ ಶುಭಾಶಯಗಳು. ಪೈಗಂಬರ ಸಾರ್ವತ್ರಿಕವಾದ ಸಹೋದರತ್ವ ಮತ್ತು ಸಹಾನುಭೂತಿಯ ಸಂದೇಶವು ಎಲ್ಲರ ಯೋಗಕ್ಷೇಮಕ್ಕಾಗಿ ಕೆಲಸ ಮಾಡಲು ನಮಗೆ ಪ್ರೇರಣೆ ನೀಡಲಿ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ.
ಮಿಲಾದಗ-ಉನ್-ನಬಿಯ ಶುಭಾಶಯಗಳು. ಪ್ರವಾದಿ ಮಹಮ್ಮದ್ ಅವರ ಆಲೋಚನೆಗಳಿಂದ ಪ್ರೇರಿತರಾಗಿ ಈ ದಿನ ಸಮಾಜದಲ್ಲಿ ಸಾಮರಸ್ಯ ಮತ್ತು ಸಹಾನುಭೂತಿಯ ಮನೋಭಾವವನ್ನು ಮತ್ತಷ್ಟು ಹೆಚ್ಚಿಸಲಿ. ಸುತ್ತಲೂ ಶಾಂತಿ ಇರಲಿ ಎಂದು ಪ್ರಧಾನಿ ಮೋದಿ ಟ್ವಿಟ್ಟರ್ನಲ್ಲಿ ಶುಭ ಕೋರಿದ್ದಾರೆ.