ನವದೆಹಲಿ:ಕೋವಿಡ್ -19 ವಿರುದ್ಧದ ಹೋರಾಟದ ಭಾಗವಾಗಿ ಪ್ರಥಮ ಮಹಿಳೆ ಸವಿತಾ ಕೋವಿಂದ್ ಅವರು ರಾಷ್ಟ್ರಪತಿಗಳ ಎಸ್ಟೇಟ್ ಶಕ್ತಿ ಹಾತ್ ನಲ್ಲಿ ಬುಧವಾರ ಮುಖಗವಚಗಳನ್ನು ತಮ್ಮ ಕೈಯಾರೆ ಹೊಲಿದಿದ್ದಾರೆ. ಈ ಮಾಸ್ಕ್ಗಳನ್ನು ದೆಹಲಿ ನಗರ ಆಶ್ರಯ ಸುಧಾರಣಾ ಮಂಡಳಿಯ ವಿವಿಧ ಆಶ್ರಯ ಮನೆಗಳಿಗೆ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.
ಕೋವಿಡ್ ವಿರುದ್ಧ ರಾಷ್ಟ್ರಪತಿ ಕೋವಿಂದ್ ಪತ್ನಿ ಫೈಟ್: ಆಶ್ರಯ ಮನೆಗಳಿಗಾಗಿ ಹೊಲಿಯುತ್ತಿದ್ದಾರೆ ಮಾಸ್ಕ್ - ಪ್ರಥಮ ಮಹಿಳೆ ಸವಿತಾ ಕೋವಿಂದ್
ಪ್ರಥಮ ಮಹಿಳೆ ಸವಿತಾ ಕೋವಿಂದ್ ಅವರು ರಾಷ್ಟ್ರಪತಿಗಳ ಎಸ್ಟೇಟ್ ಶಕ್ತಿ ಹಾತ್ ನಲ್ಲಿ ಬುಧವಾರ ಮುಖಗವಚಗಳನ್ನು ತಮ್ಮ ಕೈಯಾರೆ ಹೊಲಿದರು. ಈ ಮಾಸ್ಕ್ಗಳನ್ನು ದೆಹಲಿ ನಗರ ಆಶ್ರಯ ಸುಧಾರಣಾ ಮಂಡಳಿಯ ವಿವಿಧ ಆಶ್ರಯ ಮನೆಗಳಿಗೆ ವಿತರಿಸಲಾಗುವುದು.
ಆಶ್ರಯ ಮನೆಗಳಿಗಾಗಿ ತಮ್ಮ ಕೈಯಾರೆ ಮುಖಗವಚಗಳನ್ನು ಹೊಲಿದ ಪ್ರಥಮ ಮಹಿಳೆ ಸವಿತಾ ಕೋವಿಂದ್
ಮುಖಗವಚ ಹೊಲಿಯುವಾಗ ಪ್ರಥಮ ಮಹಿಳೆ ತಮ್ಮ ಮುಖವನ್ನು ಕೆಂಪು ಬಣ್ಣದ ಬಟ್ಟೆಯ ಮುಖಗವಚದಿಂದ ಮುಚ್ಚಿದ್ದರು. ಮುಖಗವಚಗಳನ್ನು ಹೊಲಿಯುವ ಮೂಲಕ, ಎಲ್ಲರೂ ಒಟ್ಟಾಗಿ ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಬಹುದು ಎಂಬ ಸಂದೇಶವನ್ನು ನೀಡಿದ್ದಾರೆ.
ಮುಖಗವಚ ಧರಿಸುವುದರ ಜೊತೆಗೆ ಜನರು ಸಾಮಾಜಿಕ ದೂರ ಮತ್ತು ಇತರ ಕ್ರಮಗಳನ್ನು ಅನುಸರಿಸಬೇಕು ಎಂದು ಕರೆ ನೀಡಿದ್ದಾರೆ. ಕೊರೊನಾ ಹರಡುವಿಕೆಯನ್ನು ತಡೆಯಲು ಸಾಮಾನ್ಯವಾಗಿ ಬಟ್ಟೆಯ ಮುಖವಾಡಗಳನ್ನೇ ಬಳಸಲಾಗುತ್ತದೆ. ಇವು ಮೂರು-ಪದರಗಳುಳ್ಳ ಸರ್ಜಿಕಲ್ ಮಾಸ್ಕ್ ಮತ್ತು ಎನ್ 95 ರೆಸ್ಪಿರೇಟರ್ಗಳನ್ನೊಳಗೊಂಡಿದೆ.