ನವದೆಹಲಿ: ಕೆಲ ದಿನಗಳ ದಿನಗಳ ಕಾಲ ಬೆನಿನ್, ಗ್ಯಾಂಬಿಯಾ ಮತ್ತು ಗಿನಿಯಾಕ್ಕೆ ಪ್ರವಾಸ ಕೈಗೊಂಡಿದ್ದ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅವರು ಇಂದು ನಸುಕಿನ ಜಾವ ದೆಹಲಿಗೆ ಬಂದಿಳಿದರು.
ಭಾರತದ ರಾಷ್ಟ್ರಪತಿಗಳಿಗೆ ಗಿನಿಯಾದ 'ನ್ಯಾಷನಲ್ ಆರ್ಡರ್ ಆಫ್ ಮೆರಿಟ್' ಗೌರವ - guineas highest award
ಶನಿವಾರ ಗಿನಿಯಾದ ಅತ್ಯುನ್ನತ ಪ್ರಶಸ್ತಿಯಾದ 'ದಿ ನ್ಯಾಷನಲ್ ಆರ್ಡರ್ ಆಫ್ ಮೆರಿಟ್' ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅವರಿಗೆ ಪ್ರದಾನ ಮಾಡಿ ಗೌರವಿಸಲಾಗಿದೆ.
![ಭಾರತದ ರಾಷ್ಟ್ರಪತಿಗಳಿಗೆ ಗಿನಿಯಾದ 'ನ್ಯಾಷನಲ್ ಆರ್ಡರ್ ಆಫ್ ಮೆರಿಟ್' ಗೌರವ](https://etvbharatimages.akamaized.net/etvbharat/prod-images/768-512-4034468-thumbnail-3x2-kovind.jpg)
ರಾಷ್ಟ್ರಪತಿ ಕೋವಿಂದ್
ಶನಿವಾರ ಗಿನಿಯಾದ ಅತ್ಯುನ್ನತ ಗೌರವವಾದ 'ದಿ ನ್ಯಾಷನಲ್ ಆರ್ಡರ್ ಆಫ್ ಮೆರಿಟ್' ಪ್ರಶಸ್ತಿಯನ್ನು ಕೋವಿಂದ್ ಅವರಿಗೆ ಪ್ರದಾನ ಮಾಡಿ ಗೌರವಿಸಲಾಗಿದೆ.
ಇದಕ್ಕೂ ಮೊದಲು ಗಿನಿಯಾದಲ್ಲಿನ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ ಮತ್ತು ಗಿನಿಯಾ ನಡುವಿನ ವ್ಯಾಪಾರ ಮತ್ತು ಹೂಡಿಕೆ ವೃದ್ಧಿಗೆ ಹಲವು ಅವಕಾಶಗಳಿವೆ. ಆರೋಗ್ಯ ರಕ್ಷಣೆ, ಎಬೋಲಾದಂತಹ ಮಾರಾಕ ರೋಗದ ವಿರುದ್ಧ ಹೋರಾಟ, ಕೃಷಿ, ಇಂಧನ ಸುರಕ್ಷತೆ, ಸಾಗಣೆಯಂತಹ ಯೋಜನೆಗಳಲ್ಲಿ ಜೊತೆಯಾಗಿ ಸಾಗಬೇಕು ಎಂದು ಸಲಹೆ ನೀಡಿದರು.