ನವದೆಹಲಿ: ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವನ್ನು ಶಿಕ್ಷಣ ಸಚಿವಾಲಯ ಎಂದು ಬದಲಿಸುವ ಕೇಂದ್ರ ಸಚಿವ ಸಂಪುಟದ ನಿರ್ಧಾರಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಕಿತ ಹಾಕಿದ್ದಾರೆ.
ಹೆಚ್ಆರ್ಡಿ ಇನ್ನು ಶಿಕ್ಷಣ ಸಚಿವಾಲಯ: ರಾಷ್ಟ್ರಪತಿಗಳಿಂದ ಅಂಕಿತ - ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಇನ್ನೂ ಶಿಕ್ಷಣ ಸಚಿವಾಲಯ. ಕೇಂದ್ರದ ನಿರ್ಧಾರಕ್ಕೆ ರಾಷ್ಟ್ರಪತಿಗಳಿಂದ ಗ್ರೀನ್ ಸಿಗ್ನಲ್.
ರಾಷ್ಟ್ರಪತಿಗಳಿಂದ ಅಂಕಿತ
ಸಚಿವಾಲಯದ ಮರು ನಾಮಕರಣಕ್ಕೆ ರಾಷ್ಟ್ರಪತಿಗಳು ಹಸಿರು ನಿಶಾನೆ ತೋರಿದ್ದಾರೆ ಎಂದು ಸೋಮವಾರ ಗೆಜೆಟ್ ನೊಟಿಫಿಕೇಶನ್ ಪ್ರಕಟವಾಗಿದೆ.
ನೂತನ ಶಿಕ್ಷಣ ನೀತಿಗೆ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯನ್ನು ಶಿಕ್ಷಣ ಸಚಿವಾಲಯ ಎಂದು ಬದಲಿಸುವುದಕ್ಕೆ ಜುಲೈ29 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು.