ಮಧ್ಯಪ್ರದೇಶ:ನಿನ್ನೆ ಮಧ್ಯಪ್ರದೇಶದ ಕರೇರಾದ ಅಂಗನವಾಡಿ ಕೇಂದ್ರವೊಂದರಲ್ಲಿ ಶೌಚಾಲಯದಲ್ಲಿ ಆಹಾರ ತಯಾರಿಸಲಾಗುತ್ತಿದೆ ಎಂದು ವರದರಿಯಾಗಿತ್ತು. ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ನೀಡುವ ಮಧ್ಯಾಹ್ನದ ಊಟವನ್ನು ಶೌಚಾಲಯದಲ್ಲಿ ತಯಾರಿಸಿ, ಮಕ್ಕಳಿಗೆ ಉಣಬಡಿಸುತ್ತಿದ್ದಾರೆ ಎಂಬ ಆರೋಪವಿತ್ತು. ಈ ಕುರಿತುಮಹಿಳಾ ಮತ್ತು ಮಕ್ಕಳು ಕಲ್ಯಾಣ ಸಚಿವೆ ಇಮಾರ್ತಿ ದೇವಿ ಸ್ಪಷ್ಟನೆನೀಡಿದ್ದಾರೆ.
ಶೌಚಾಲಯ ಮತ್ತು ಅಡುಗೆ ಮನೆ ನಡುವೆ ವಿಭಜನೆ ಇದ್ದರೆ ಆಹಾರವನ್ನು ತಯಾರಿಸುವುದರಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಮಧ್ಯಪ್ರದೇಶ ಸಚಿವೆ ಇಮಾರ್ತಿ ದೇವಿ ಹೇಳಿದ್ದಾರೆ.
ಶೌಚಾಲಯ ಮತ್ತು ಅಡುಗೆ ಮನೆ ಅಕ್ಕ-ಪಕ್ಕದಲ್ಲಿದ್ದರೆ ಏನು ತೊಂದರೆಯಾಗುತ್ತೆ? ಈ ದಿನಗಳಲ್ಲಿ ನಮ್ಮ ಮನೆಗಳಲ್ಲಿ ಸಹ ನಾವು ಶೌಚಾಲಯ-ಸ್ನಾನಗೃಹವನ್ನು ಜೋಡಿಸಿದ್ದೇವೆ. ಮನೆಯಲ್ಲಿಯೇ ಶೌಚಾಲಯವಿರುತ್ತೆ. ಇದೇ ಕಾರಣಕ್ಕೆ ನಮ್ಮ ಸಂಬಂಧಿಕರು ನಮ್ಮ ಮನೆಯಲ್ಲಿ ತಿನ್ನಲು ನಿರಾಕರಿಸುತ್ತಾರಾ? ಎಂದು ಇಮಾರ್ತಿ ದೇವಿ ಪ್ರಶ್ನಿಸಿದ್ದಾರೆ.
ಪಾತ್ರೆಗಳನ್ನು ಬಾತ್ರೂಮ್ ಸೀಟಿನ ಮೇಲೆ ಇಟ್ಟಿದ್ದಾರೆ ಅಷ್ಟೇ.. ಅಲ್ಲಿ ಶೌಚಾಲಯ ಇದೆಯೇ... ಶೌಚಾಲಯದಲ್ಲಿ ಅಡುಗೆ ಮಾಡಲಾಗ್ತಿದೆಯೇ ಅಥವಾ ಶೌಚಾಲಯ ಮತ್ತು ಅಡುಗೆ ಮನೆ ಅಕ್ಕ-ಪಕ್ಕದಲ್ಲಿವೆಯೇ ಎಂಬ ಕುರಿತು ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.