ಕರ್ನಾಟಕ

karnataka

ETV Bharat / bharat

ಸರ್ದಾರ್​ ಸರೋವರದಲ್ಲಿ ಸಮುದ್ರವಿಮಾನ ಸೇವೆಗೆ ಏರೋಡ್ರೋಮ್​ಗಳ ನಿರ್ಮಾಣ, ಅಕ್ಟೋಬರ್​ಗೆ ಪೂರ್ಣ ಸಾಧ್ಯತೆ - ಸರ್ದಾರ್ ಸರೋವರ್ ನರ್ಮದಾ ನಿಗಮ್ ಲಿಮಿಟೆಡ್

ಸಮುದ್ರ ವಿಮಾನ ಸೇವೆಗಾಗಿ ಸಬರಮತಿ ಮತ್ತು ಕೆವಾಡಿಯಾ ಬಳಿಯ ಸರ್ದಾರ್ ಸರೋವರದ ಬಳಿ ಏರೋಡ್ರೋಮ್​ಗಳ ಕಾಮಗಾರಿ ವೇಗವಾಗಿ ನಡೆಯುತ್ತಿದೆ.

seaplane plan
ಸಮುದ್ರವಿಮಾನ ಸೇವೆ

By

Published : Sep 13, 2020, 6:40 PM IST

ಅಹಮದಾಬಾದ್ ( ಗುಜರಾತ್): ಸೀ ಪ್ಲೇನ್​ (ಸಮುದ್ರ ವಿಮಾನ ಸೇವೆಗಾಗಿ) ಸಬರಮತಿ ಮತ್ತು ಕೆವಾಡಿಯಾ ಬಳಿಯ ಸರ್ದಾರ್ ಸರೋವರದ ಬಳಿ ಏರೋಡ್ರೋಮ್​ಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಈ ಯೋಜನೆಯನ್ನು ಒಳನಾಡು ಜಲ ಸಾರಿಗೆ ಪ್ರಾಧಿಕಾರ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಜಂಟಿಯಾಗಿ ನಿರ್ವಹಿಸುತ್ತಿದ್ದು, ಸಬರಮತಿ ರಿವರ್‌ಫ್ರಂಟ್ ಮತ್ತು ಕೆವಾಡಿಯಾ ಕಾಲೋನಿಯಲ್ಲಿ ಈ ಏರೋಡ್ರೋಮ್​ಗಳ ನಿರ್ಮಾಣ ಮಾಡಲಾಗುತ್ತಿದೆ.

ಸಮುದ್ರವಿಮಾನ ಸೇವೆ

ಈಗಾಗಲೇ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದು, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆಯಾದ ಅಕ್ಟೋಬರ್ 31ರಂದು ಸಮುದ್ರ ವಿಮಾನ ಸೇವೆ ಪ್ರಾರಂಭವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸೇವೆಯನ್ನು ಉದ್ಘಾಟಿಸುವ ನಿರೀಕ್ಷೆಯಿದೆ.

ಅಧಿಕೃತ ಮೂಲಗಳ ಪ್ರಕಾರ, ಸರ್ದಾರ್ ಸರೋವರ್ ನರ್ಮದಾ ನಿಗಮ್ ಲಿಮಿಟೆಡ್ (ಎಸ್‌ಎಸ್‌ಎನ್‌ಎನ್‌ಎಲ್) ಸರ್ದಾರ್ ಸರೋವರ್ ಅಣೆಕಟ್ಟು ಬಳಿ ನೀರಿನ ಏರೋಡ್ರೋಮ್‌ಗಾಗಿ 2,000 ಚದರ ಮೀಟರ್ ಭೂಮಿಯನ್ನು ನೀಡಿದ್ದು, ಅಹಮದಾಬಾದ್​ನಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಲಿದೆ.

ABOUT THE AUTHOR

...view details