ಕರ್ನಾಟಕ

karnataka

ETV Bharat / bharat

ಆಸ್ಪತ್ರೆಯ ನಿರ್ಮಾಣ ಹಂತದ ಛಾವಣಿ ಕುಸಿದು 6 ತಿಂಗಳ ಗರ್ಭಿಣಿ ನರ್ಸ್​ ಸಾವು - Kovid Hospital Chittoor

ಆಸ್ಪತ್ರೆಯ ದುರಸ್ತಿ ಕಾರ್ಯ ನಡೆಯುವ ವೇಳೆ ಛಾವಣಿಯ ಒಂದು ಭಾಗ ಕುಸಿದು ನರ್ಸ್​ ಸಾವನಪ್ಪಿದ್ದಾರೆ. ಕೊರೊನಾ ಹಿನ್ನೆಲೆ 6 ತಿಂಗಳ ಗರ್ಭಿಣಿಯಾದರೂ ಕೆಲಸಕ್ಕೆ ಹಾಜರಾಗಿದ್ದರು. ಅಲ್ಲದೆ ಘಟನೆಯಲ್ಲಿ ಇನ್ನಿಬ್ಬರು ಕೊರೊನಾ ಸೋಂಕಿತರು ಗಾಯಗೊಂಡಿದ್ದಾರೆ.

pregnant-women-died-being-hit-by-slab-scabs-in-covid-hospital
ಆಸ್ಪತ್ರೆಯ ನಿರ್ಮಾಣ ಹಂತದ ಛಾವಣಿ ಕುಸಿದು 6 ತಿಂಗಳ ಗರ್ಭಿಣಿ ನರ್ಸ್​ ಸಾವು

By

Published : Oct 5, 2020, 12:29 PM IST

ಆಂಧ್ರ ಪ್ರದೇಶ: ಇಲ್ಲಿನ ತಿರುಪತಿಯ ಸಿಮ್ಸ್ ಕೋವಿಡ್ ಆಸ್ಪತ್ರೆಯ ನಿರ್ಮಾಣ ಹಂತದಲ್ಲಿದ್ದ ಛಾವಣಿಯ ಭಾಗ ಕುಸಿದು 6 ತಿಂಗಳ ಗರ್ಭಿಣಿ ನರ್ಸ್​​​ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯ ಕೊನೆಯ ಮಹಡಿಯ ತುರ್ತು ಚಿಕಿತ್ಸಾ ಘಟಕದ ಬಳಿ ಕಟ್ಟಡದ ದುರಸ್ತಿ ಕಾರ್ಯ ನಡೆಯುತ್ತಿತ್ತು.

ಆಸ್ಪತ್ರೆಯ ನಿರ್ಮಾಣ ಹಂತದ ಛಾವಣಿ ಕುಸಿದು 6 ತಿಂಗಳ ಗರ್ಭಿಣಿ ನರ್ಸ್​ ಸಾವು

ಭಾನುವಾರ ರಾತ್ರಿ ಇಟ್ಟಿಗೆ ಹಾಗೂ ಛಾವಣಿಗೆ ಹಾಕಿದ್ದ ಕಾಮಗಾರಿಯ ವಸ್ತುಗಳು ಗಾಳಿಯಲ್ಲಿ ಹಾರಿ ಹೋಗಿದ್ದು, ಈ ವೇಳೆ ಹೊಸದಾಗಿ ನಿರ್ಮಿಸಲಾಗುತ್ತಿದ್ದ ಛಾವಣಿಯ ಭಾಗ ನಲಕ್ಕುರುಳಿ ಘಟನೆ ಸಂಭವಿಸಿದೆ. ಇನ್ನು ಘಟನೆಯಲ್ಲಿ ಇನ್ನಿಬ್ಬರು ಕೋವಿಡ್​ ಸೋಂಕಿತರಿಗೂ ಗಾಯಗಳಾಗಿವೆ. ಈ ವೇಳೆ ಅಲ್ಲೇ ಕೆಲಸ ನಿರ್ವಹಿಸುತ್ತಿದ್ದ ನರ್ಸ್​ ರಾಧಿಕಾ ಎಂಬುವರು ಸಾವನ್ನಪ್ಪಿದ್ದಾರೆ.

ಕೊರೊನಾ ಹರಡುತ್ತಿರುವ ಹಿನ್ನೆಲೆ 6 ತಿಂಗಳ ಗರ್ಭಿಣಿಯಾದರೂ ಕೆಲಸಕ್ಕೆ ಸ್ವಯಿಚ್ಛೆಯಿಂದ ರಾಧಿಕಾ ಹಾಜರಾಗಿದ್ದರು. ಇನ್ನು ಘಟನೆ ನಡೆದ ಸ್ಥಳಕ್ಕೆ ಬಿಜೆಪಿ ರಾಜ್ಯ ವಕ್ತಾರ ಭಾನು ಪ್ರಕಾಶ್​ ರೆಡ್ಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ABOUT THE AUTHOR

...view details