ಭರತ್‌ಪುರ: ಗುಟ್ಕಾ ನೀಡದಿದ್ದಕ್ಕೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಪರಿಣಾಮ ಮಹಿಳೆಯೊಬ್ಬರಿಗೆ ಗರ್ಭಪಾತವಾದ ಆಘಾತಕಾರಿ ಘಟನೆ ರಾಜಸ್ಥಾನದ ಭರತ್ ಪುರ್ ಜಿಲ್ಲೆಯಲ್ಲಿ ನಡೆದಿದೆ.
ಗುಟ್ಕಾ ನೀಡದ ಮಹಿಳೆಗೆ ಗರ್ಭಪಾತವಾಗುವಂತೆ ಹೊಡೆದ ದುಷ್ಕರ್ಮಿಗಳು - ಗರ್ಭ ಕಳೆದುಕೊಂಡ ಮಹಿಳೆ
ಗರ್ಭಿಣಿ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಪರಿಣಾಮ, ಆಕೆಗೆ ಗರ್ಭಪಾತವಾಗಿರುವ ಘಟನೆ ರಾಜಸ್ಥಾನದ ಭರತ್ಪುರ್ ಜಿಲ್ಲೆಯಲ್ಲಿ ನಡೆದಿದೆ. ಗುಟ್ಕಾ ನೀಡಲು ನಿರಾಕರಿಸಿದ್ದೇ ಹಲ್ಲೆಗೆ ಕಾರಣ ಎಂದು ತಿಳಿದು ಬಂದಿದೆ.
Pregnant woman loses foetus after being beaten in Rajasthan
ಹಲ್ಲೆಗೊಳಗಾದ ಮಹಿಳೆ ಜಿಲ್ಲೆಯ ಧೀಮ್ರಿ ಗ್ರಾಮದವರಾಗಿದ್ದು, ಗುಟ್ಕಾ ನೀಡಲು ನಿರಾಕರಿಸಿದ್ದಕ್ಕೆ ಕೋಪಗೊಂಡ ಕೆಲ ವ್ಯಕ್ತಿಗಳು ದೊಣ್ಣೆ ಮತ್ತು ಕಲ್ಲಿನಿಂದ ಗರ್ಭಿಣಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ, ಆಕೆಗೆ ಗರ್ಭಪಾತವಾಗಿದೆ.
ಘಟನೆ ನಡೆದ ತಕ್ಷಣ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.