ನವದೆಹಲಿ: ವರದಕ್ಷಿಣೆ ವಿಚಾರವಾಗಿ ಗಂಡನೋರ್ವ ಕಟ್ಟಿಕೊಂಡ ಹೆಂಡತಿಗೆ ಫೋನ್ ಮೂಲಕ ತಲಾಖ್ ನೀಡಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಗರ್ಭಿಣಿಯಾಗಿರುವ ಈಕೆ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಹೊಟ್ಟೆಯಲ್ಲಿರುವ ಭ್ರೂಣ ತೆಗೆಸುವಂತೆ ಮೇಲಿಂದ ಮೇಲೆ ನನಗೆ ಅತ್ತೆ ಹಾಗೂ ಗಂಡ ಕಿರುಕುಳ ನೀಡುತ್ತಿರುವುದಾಗಿ ಆರೋಪ ಮಾಡಿದ್ದಾಳೆ. ಜತೆಗೆ ಭ್ರೂಣ ಕೊಲ್ಲಲು ಮಾತ್ರೆ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದು, ಅನೇಕ ಸಲ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿದ್ದಾಳೆ.